ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೂಳೂರು: ಕೆಟ್ಟುಹೋದ ಹೆದ್ದಾರಿ ದುರಸ್ತಿಗೆ ಸಂಸದ, ಶಾಸಕರ ಸೂಚನೆ

ಸುರತ್ಕಲ್ : ರಾಷ್ಟ್ರೀಯ ಹೆದ್ದಾರಿ 66ರ ಕೂಳೂರು ಮೇಲ್ಸೇತುವೆ , ಕೂಳೂರು ರಿಲಯನ್ಸ್ ಪೆಟ್ರೋಲ್ ಬಂಕ್,ಸುರತ್ಕಲ್ ತಡಂಬೈಲ್ ಸರ್ವಿಸ್ ರಸ್ತೆ ಡಾಮರೀಕರಣಕ್ಕೆ ಶಾಸಕ ಡಾ.ಭರತ್ ಶೆಟ್ಟಿ ವೈ ಮನವಿ ಮೇರೆಗೆ ಸಂಸದ ನಳಿನ್ ಕುಮಾರ್ ಕಟೀಲ್ ಹೆದ್ದಾರಿ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದು ಕಾಮಗಾರಿ ಆರಂಭವಾಗಲಿದೆ.

ಮಳೆಗಾಲ ಶುರುವಾಗುವ ಮುನ್ನವೇ ಸರ್ವಿಸ್ ರಸ್ತೆ ಹೊಂಡಮಯವಾಗಿದೆ. ಕೂಳೂರು ಸೇತುವೆ ಡಾಮರು ಎದ್ದು ಹೋಗಿ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು.ಈ ಕುರಿತ ಮಾದ್ಯಮಗಳು,ಸಂಘ ಸಂಸ್ಥೆಗಳ ಮನವಿಗೆ ಸ್ಪಂದಿಸಿ ಶಾಸಕ ಡಾ.ಭರತ್ ಶೆಟ್ಟಿವೈ ಅವರು ಸಂಸದರಿಗೆ ಮಾಹಿತಿ ನೀಡಿದ್ದು, ಕೂಡಲೇ ಹೆದ್ದಾರಿ ದುರಸ್ತಿ ಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸೋಮವಾರ ರಾತ್ರಿಯಿಂದ ಸೇತುವೆ ಡಾಂಬರೀಕರಣ ನಡೆಯಲಿದೆ. ಕಾಮಗಾರಿ ವೇಳೆ ವಾಹನ ಸಂಚಾರಕ್ಕೆ ತೊಡಕಾಗದಂತೆ ಕಾಮಗಾರಿ ನಡೆಸಲು ಇಲಾಖಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಡಾ.ಭರತ್ ಶೆಟ್ಟಿ ಹೇಳಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

02/05/2022 06:38 pm

Cinque Terre

7.04 K

Cinque Terre

4

ಸಂಬಂಧಿತ ಸುದ್ದಿ