ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಸಿಹಿತ್ಲು: ಬಹುಮಹಡಿ ಕಟ್ಟಡ ಕಾಮಗಾರಿಗೆ ಅಕ್ರಮವಾಗಿ ಸಮುದ್ರದ ಮರಳು ಸಾಗಾಟಕ್ಕೆ ಸ್ಥಳೀಯರಿಂದ ತಡೆ

ಮುಲ್ಕಿ: ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಸಿಹಿತ್ಲು ಗೆರೋಡಿ ಬಳಿಯ ಸಮುದ್ರ ಕಿನಾರೆಯಲ್ಲಿ ಐದು ಅಂತಸ್ತಿನ ಬಹು ಮಹಡಿ ಕಟ್ಟಡಕ್ಕೆ ಸಮುದ್ರ ಬದಿಯಿಂದ ಅಕ್ರಮ ಮರಳು ಸಾಗಾಟ ನಡೆಯುತ್ತಿದ್ದುದನ್ನು ಪತ್ತೆಹಚ್ಚಿದ ಗ್ರಾಮಸ್ಥರು ಕೂಡಲೇ ಗಣಿ ಭೂವಿಜ್ಞಾನ ಇಲಾಖೆ, ಪಂಚಾಯಿತಿಗೆ ದೂರು ನೀಡಿದ್ದಾರೆ.

ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಸಿಹಿತ್ಲು ಗೆರೋಡಿ ಬಳಿಯಲ್ಲಿ ಮಂಗಳೂರಿನ ಖ್ಯಾತ ಆಸ್ಪತ್ರೆಯ ಸುಮಾರು 15 ವೈದ್ಯರ ಸಹಭಾಗಿತ್ವದಲ್ಲಿ ಐದು ಅಂತಸ್ತಿನ ಬಹು ಮಹಡಿ ಕಟ್ಟಡ ಕಾಮಗಾರಿ ನಡೆಯುತ್ತಿದ್ದು ಕಾಮಗಾರಿ ನಡೆಯುವ ಸ್ಥಳದಲ್ಲಿ ಕಟ್ಟಡ ಕಾಮಗಾರಿಗೆ ತಂದಿಟ್ಟ ಮರಳಿನ ರಾಶಿ ಬದಿಗಿಟ್ಟು ರಾಜಾರೋಷವಾಗಿ ಕಾನೂನುಬಾಹಿರವಾಗಿ ಹಿಟಾಚಿ ಯಂತ್ರದ ಮೂಲಕ ಸಮುದ್ರದ ಮರಳನ್ನು ಕಟ್ಟಡದ ಕಾಮಗಾರಿಗೆ ವ್ಯವಸ್ಥಿತ ರೀತಿಯಲ್ಲಿ ಸಾಗಾಟ ನಡೆಯುತ್ತಿದ್ದುದನ್ನು ಗಮನಿಸಿದ ಸ್ಥಳೀಯ ನಾಗರಿಕರು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಹಳೆಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ. ನಿರ್ಮಾಣ ಹಂತದ ಕಟ್ಟಡದ ಗುತ್ತಿಗೆದಾರನಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

Edited By : Nagaraj Tulugeri
Kshetra Samachara

Kshetra Samachara

08/04/2022 06:04 pm

Cinque Terre

12.02 K

Cinque Terre

2

ಸಂಬಂಧಿತ ಸುದ್ದಿ