ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು : ಸವಣೂರು ದೇವಸ್ಥಾನದ 2 ಕೋಟಿ ವೆಚ್ಚದ ತಡೆಗೋಡೆಗೆ ಶಿಲಾನ್ಯಾಸ

ಪುತ್ತೂರಿನ ಸವಣೂರಿನ ಮುಗೇರು ವಿಷ್ಣುಮೂರ್ತಿ ದೇವಸ್ಥಾನಕ್ಕೆ ನಿರ್ಮಾಣಗೊಳ್ಳಲಿರುವ ತಡೆಗೋಡೆ ಕಾಮಗಾರಿಯ ಶಿಲಾನ್ಯಾಸ ಜನವರಿ 4 ದೇವಸ್ಥಾನದ ಆವರಣದಲ್ಲಿ ನಡೆಯಿತು. 2 ಕೋಟಿ ವೆಚ್ಚದಲ್ಲಿ ಈ ತಡೆಗೋಡೆ ನಿರ್ಮಾಣಗೊಳ್ಳಲಿದ್ದು, ಕಾಮಗಾರಿಯ ಶಿಲಾನ್ಯಾಸವನ್ನು ಮಂಗಳೂರು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ನೆರವೇರಿಸಿದರು. ರಾಜ್ಯ ಸರಕಾರ ದೇವಸ್ಥಾನಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ದೇವಸ್ಥಾನಗಳಿಗೆ ಸ್ವಾಯುತ್ತತೆ ನೀಡುವ ಬಗ್ಗೆಯೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದ ಅವರು ಇದರಿಂದಾಗಿ ದೇವಸ್ಥಾನಕ್ಕೆ ಬೇಕಾದ ಅನುದಾನಕ್ಕಾಗಿ ಸರಕಾರವನ್ನು ಕಾಯದೆ, ದೇವಸ್ಥಾನದಿಂದಲೇ ಪಡೆದುಕೊಳ್ಳಲು ಸಾಧ್ಯವಾಗಲಿದೆ ಎಂದರು. ದಕ್ಷಿಣಕನ್ನಡ ಉಸ್ತುವಾರಿ ಸಚಿವ ಎಸ್.ಅಂಗಾರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

04/01/2022 04:49 pm

Cinque Terre

7.31 K

Cinque Terre

0

ಸಂಬಂಧಿತ ಸುದ್ದಿ