ಸುರತ್ಕಲ್: ಕರ್ನಾಟಕ ರಾಜ್ಯ ಸರಕಾರದ 55 ಲಕ್ಷ ರೂ. ವಿಶೇಷ ಅನುದಾನದಡಿಯಲ್ಲಿ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಹೊಸಬೆಟ್ಟು 8ನೇ ವಾರ್ಡಿನ ಮಹಾಂಕಾಳಿ ದೇವಸ್ಥಾನದ ದ್ವಾರದಿಂದ ಮಹಾಂಕಾಳಿ ದೇವಸ್ಥಾನದವರೆಗಿನ ರಸ್ತೆ ಮತ್ತು ಅಡ್ಡರಸ್ತೆ ಹಾಗೂ ಮಹಾಂಕಾಳಿ ದೇವಸ್ಥಾನದ ದ್ವಾರದ ಮುಂಭಾಗದ ಕಾಂಕ್ರೀಟಿಕರಣ ರಸ್ತೆಯನ್ನು ಶಾಸಕ ಡಾ.ವೈ ಭರತ್ ಶೆಟ್ಟಿ ಲೋಕಾರ್ಪಣೆಗೊಳಿಸಿದರು.
ಬಳಿಕ ಶಾಸಕರು ಈಶ್ವರ ಗೂಳಿ ಮಹಾಂಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿ ಸ್ಥಳೀಯ ಜನರ ಅಹವಾಲುಗಳನ್ನು ಸ್ವೀಕರಿಸಿದರು. ಈ ಕಾರ್ಯಕ್ರಮದಲ್ಲಿ ಸ್ಥಳೀಯ ಕಾರ್ಪೋರೇಟರ್ ವರುಣ್ ಚೌಟ, ಮನಪಾ ಸದಸ್ಯ ಕಿರಣ್ ಕುಮಾರ್ ಕೋಡಿಕಲ್, ಪ್ರಮುಖರಾದ ಪದ್ಮನಾಭ ಸುವರ್ಣ, ವಿಟ್ಟಲ್ ಸಾಲಿಯಾನ್, ವಸಂತ್ ಹೊಸಬೆಟ್ಟು, ಲೀಲಾವತಿ, ಯೋಗೀಶ್ ಸನಿಲ್ ಉಪಸ್ಥಿತರಿದ್ದರು.
Kshetra Samachara
09/10/2021 03:38 pm