ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: 'ನಮ್ಮ ಬಾಕಿ ಸಂಬಳ ಕೊಟ್ಟು ಮನೆಗೆ ಕಳಿಸಿ'

ವರದಿ: ರಹೀಂ ಉಜಿರೆ

ಉಡುಪಿ: ಉದ್ಯಮಿ ಬಿ.ಆರ್‌. ಶೆಟ್ಟಿ ನಿರ್ಮಿಸಿದ ಉಡುಪಿಯ ಮಕ್ಕಳು ಮತ್ತು ಮಹಿಳಾ ಆಸ್ಪತ್ರೆಯನ್ನು ಸರಕಾರ ತನ್ನ ವಶಕ್ಕೆ ಪಡೆದಿದ್ದರೂ ಇಲ್ಲಿನ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ. ಇವತ್ತಿನಿಂದ ಆಸ್ಪತ್ರೆಯನ್ನು ಅಧಿಕೃತವಾಗಿ ಸರಕಾರ ನಿರ್ವಹಿಸಲಿದೆ. ಆದರೆ ನಾವೆಲ್ಲಿಗೆ ಹೋಗಬೇಕು? ನಮ್ಮ ಐದು ತಿಂಗಳ ವೇತನವನ್ನಾದರೂ ಪಾವತಿಸಿ ಎಂದು ಸಿಬ್ಬಂದಿ ಪಟ್ಟು ಹಿಡಿದಿದ್ದಾರೆ.

ಈಗಾಗಲೇ ಅನೇಕ ಬಾರಿ ವೇತನಕ್ಕಾಗಿ ಪ್ರತಿಭಟನೆ ನಡೆಸಿದ್ದ ಸಿಬ್ಬಂದಿ ಈಗ ಕೊನೆ ಹಂತದ ಹೋರಾಟಕ್ಕೆ ಇಳಿದಿದ್ದಾರೆ. ಸಮಸ್ಯೆಗಳ ಕೂಸು ಎನಿಸಿಕೊಂಡಿದ್ದ ಈ ಆಸ್ಪತ್ರೆಯನ್ನು ಕೊನೆಗೂ ಸರಕಾರ ತನ್ನ ಸುಪರ್ದಿಗೆ ಪಡೆದಿದೆ. ಆದರೆ ನಾವು ಇಂದಿನಿಂದ ಮನೆಗೆ ಹೋಗಬೇಕು. ಮನೆಗೆ ಕಳಿಸಿದರೂ ಪರವಾಗಿಲ್ಲ, ನಮ್ಮ ಐದು ತಿಂಗಳ ಬಾಕಿ ವೇತನ ಕೊಡಿ ಎಂಬುದು ಆಸ್ಪತ್ರೆ ಸಿಬ್ಬಂದಿ ವಾದ.

ಈವರೆಗೂ 3 ಬಾರಿ ಮುಷ್ಕರ ನಡೆಸಲಾಗಿದ್ದು, ಅಲ್ಪಸ್ವಲ್ಪ ವೇತನ ಬಿಡುಗಡೆ ಮಾಡಲಾಗುತ್ತಿದೆ. ಪ್ರಸ್ತುತ ಬಿ.ಆರ್‌. ಶೆಟ್ಟಿ ವೆಂಚರ್ಸ್ ಸಿಬ್ಬಂದಿಯ 4 ತಿಂಗಳ ವೇತನ ಬಾಕಿ ಇಟ್ಟಿದೆ. ಅದನ್ನು ಸರಕಾರ ಪಾವತಿಸುವ ಬಗ್ಗೆ ಮತ್ತು ಖಾಸಗಿಯಾಗಿ ನೇಮಿಸಲಾಗಿರುವ ಎಲ್ಲ ಸಿಬ್ಬಂದಿ ಉಳಿಸಿಕೊಳ್ಳುವ ಭರವಸೆ ಸಿಕ್ಕಿಲ್ಲ ಎಂಬುದು ಪ್ರತಿಭಟನಾನಿರತ ಸಿಬ್ಬಂದಿಯ ದೂರು.

ಇವತ್ತು ಉಡುಪಿಯಲ್ಲಿದ್ದ ಸಿಎಂಗೆ ಆಸ್ಪತ್ರೆ ಸಿಬ್ಬಂದಿ ವೇತನದ ವಿಚಾರವನ್ನು ಗಮನಕ್ಕೆ ತರಲಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬೊಮ್ಮಾಯಿ, ವೇತನ ಪಾವತಿಸುವ ಭರವಸೆ ನೀಡಿದ್ದಾರೆ. ಮುಂದೇನಾಗುತ್ತೋ ನೋಡಬೇಕು.

Edited By :
PublicNext

PublicNext

01/06/2022 05:52 pm

Cinque Terre

51.33 K

Cinque Terre

0

ಸಂಬಂಧಿತ ಸುದ್ದಿ