ಬಂಟ್ವಾಳ: ಪರಾವಲಂಬಿ ಆಗುವ ಈ ಸಮಾಜ ಬದಲಾಗಬೇಕಾದರೆ ಸ್ವಾಭಿಮಾನಿಯನ್ನಾಗಿಸುವ ಶಿಕ್ಷಣ ಪದ್ಧತಿಯಿಂದಷ್ಟೆ ಸಾಧ್ಯ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು. ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಶ್ರೀರಾಮ ಸೆಕೆಂಡರಿ ಸ್ಕೂಲ್ ಉದ್ಘಾಟಿಸಿ ಅವರು ಮಾತನಾಡಿದರು.
ಈ ವರ್ಷ ಸರಸ್ವತಿ ಪೂಜೆಗೆ ಹೊಸ ಶಿಕ್ಷಣ ನೀತಿಯ ಪುಸ್ತಕ ಹೊರತರುವ ಯೋಚನೆ ಇದೆ. ಸ್ವಾವಲಂಬಿ, ಸ್ವಾಭಿಮಾನದ ಸಮಾಜದ ನಿರ್ಮಾಣಕ್ಕೆ ಸ್ವಾತಂತ್ರ್ಯ ಬಂತು, ಶಿಕ್ಷಣ ವ್ಯವಸ್ಥೆಯೂ ವ್ಯಕ್ತಿಯನ್ನು ಸ್ವಾವಲಂಬಿಯನ್ನಾಗಿಸಬೇಕು ಎಂದರು.
ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾತನಾಡಿ, ವೃತ್ತಿಪರ ಶಿಕ್ಷಣವನ್ನು ನೀಡುವ ಶಿಕ್ಷಣ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಆಗುತ್ತದೆ ಎಂದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕರ್ನಾಟಕದಲ್ಲೂ ಪಠ್ಯಪುಸ್ತಕ ಪರಿಷ್ಕರಣೆಯ ಕುರಿತು ಅಪಸ್ವರ ಎತ್ತಲಾಗಿದೆ, ಆದರೆ ಇಂದು ಸಂಸ್ಕಾರಭರಿತ ಶಿಕ್ಷಣ ಅಗತ್ಯ ಎಂದರು.
ಉದ್ಯಮಿ ಉದಯಕುಮಾರ್ ಶೆಟ್ಟಿ ಮುನಿಯಾಲು, ಬಂಟ್ವಾಳ ತಹಸೀಲ್ದಾರ್ ಡಾ.ಸ್ಮಿತಾ ರಾಮು, ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿ ಸೇರಿದಂತೆ ಮುಂತಾದವರಿದ್ದರು.
PublicNext
02/07/2022 09:04 pm