ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಡುಪಣಂಬೂರು: ಪುಸ್ತಕಗಳನ್ನು ಓದುವುದರಿಂದ ಜ್ಞಾನದ ಭಂಡಾರ ವೃದ್ಧಿ: ದುಗ್ಗಣ್ಣ ಸಾವಂತರು

ಮುಲ್ಕಿ: ಮುಲ್ಕಿ ಸಮೀಪದ ಪಡುಪಣಂಬೂರು ಗ್ರಾಪಂ ವ್ಯಾಪ್ತಿಯ ಬೆಳ್ಳಾಯರು ಗ್ರಾಮದ ಕೆರೆಕಾಡುವಿನಲ್ಲಿ ಸ್ವಚ್ಚ ಸಂಕೀರ್ಣ ಘಟಕ ಹಾಗೂ ಪಂಚಾಯತ್ ಬಳಿ ಡಿಜಿಟಲ್ ಗ್ರಂಥಾಲಯವನ್ನು ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು

ಈ ಸಂದರ್ಭ ಅವರು ಮಾತನಾಡಿ ಸ್ವಚ್ಛ ಭಾರತಕ್ಕೆ ಗ್ರಾಮಸ್ಥರ ಸಹಕಾರ ಅಗತ್ಯ ಎಂದರು.

ಮುಖ್ಯ ಅತಿಥಿಗಳಾಗಿ ಮುಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು ಮಾತನಾಡಿ ಪುಸ್ತಕಗಳನ್ನು ಓದುವ ಮೂಲಕ ಜ್ಞಾನದ ಭಂಡಾರ ವೃದ್ಧಿಯಾಗುತ್ತದೆ ಹಾಗೂ ಸಮಸ್ಯೆಗಳು ಸಂದಿಗ್ಧತೆಗಳು ನಿವಾರಣೆಯಾಗುತ್ತದೆ. ಡಿಜಿಟಲ್ ಗ್ರಂಥಾಲಯ ಲೋಕಾರ್ಪಣೆ ಮೂಲಕ ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸಗಳು ಆಗಿದೆ ಎಂದು ಶುಭ ಹಾರೈಸಿದರು.

ಈ ಸಂದರ್ಭ ಮಂಗಳೂರು ಗ್ರಂಥಾಲಯದ ಅಧಿಕಾರಿ ಗಾಯತ್ರಿ, ಮುಲ್ಕಿ ಅರಮನೆಯ ಗೌತಮ್ ಜೈನ್ ,ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರು ಉಪಸ್ಥಿತರಿದ್ದರು.ಪಂಚಾಯತ್ ಪಿಡಿಒ ಅರುಣ್ ಪ್ರದೀಪ್ ಡಿ ಸೋಜಾ ಸ್ವಾಗತಿಸಿದರು. ಕಾರ್ಯದರ್ಶಿ ಲೋಕನಾಥ ಭಂಡಾರಿ ನಿರೂಪಿಸಿದರು.

Edited By : Manjunath H D
Kshetra Samachara

Kshetra Samachara

20/12/2021 01:06 pm

Cinque Terre

3.86 K

Cinque Terre

0

ಸಂಬಂಧಿತ ಸುದ್ದಿ