ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕೇರಳ ಸರಕಾರದಿಂದ ಕನ್ನಡದ ಮೇಲೆ ಮತ್ತೆ ಗದಾಪ್ರಹಾರ- ಕನ್ನಡ ಅಂಗನವಾಡಿಗೆ ಮಲಯಾಳಂ ಶಿಕ್ಷಕಿ ನೇಮಕ.

ಮಂಗಳೂರು: ಕೇರಳ ಸರಕಾರ ಮತ್ತೆ ಕನ್ನಡ, ಕನ್ನಡ ಭಾಷೆಯ ಮೇಲೆ ಗದಾಪ್ರಹಾರ ಮಾಡಲು ಹೊರಟಿದೆ. ಕನ್ನಡ ಬಾರದ ಮಲಯಾಲಂ ಶಿಕ್ಷಕಿಯನ್ನು ಕನ್ನಡ ಮಾಧ್ಯಮ‌ ಅಂಗನವಾಡಿಗೆ ನೇಮಕ ಮಾಡಿ ಕನ್ನಡ ಭಾಷಾ ಅಲ್ಪಸಂಖ್ಯಾತರ ಮೇಲೆ ಮತ್ತೆ ದಬ್ಬಾಳಿಕೆ ಮಾಡುತ್ತಿದೆ ಎಂದು ಪೋಷಕರು ಪ್ರತಿಭಟನೆ ನಡೆಸಿದ್ದಾರೆ.

ಕಾಸರಗೋಡು ಜಿಲ್ಲೆಯ ಅಡೂರಿನ‌ ಕೋರಿಕಂಡ ಕನ್ನಡ ಮಾಧ್ಯಮದ ಅಂಗನವಾಡಿ ಶಾಲೆಗೆ ಕನ್ನಡ ಬಾರದ ಮಲಯಾಲಂ ಶಿಕ್ಷಕಿಯನ್ನು ನೇಮಕ ಮಾಡಲಾಗಿತ್ತು. ಇದನ್ನು ವಿರೋಧಿಸಿ ಕನ್ನಡ ಸಂರಕ್ಷಣಾ ಹೋರಾಟ ಸಮಿತಿ‌ ನೇತೃತ್ವದಲ್ಲಿ ಪ್ರತಿಭಟನೆ ಮಕ್ಕಳ ಪೋಷಕರು ದೇಲಂಪಾಡಿ ಗ್ರಾಮಪಂಚಾಯತ್ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ಕೋರಿಕಂಡ ಅಂಗನವಾಡಿಯಲ್ಲಿ ಒಟ್ಟು 18 ಮಕ್ಕಳು ಇದ್ದು, ಇವರಲ್ಲಿ 16 ಮಕ್ಕಳು ಕನ್ನಡ ಭಾಷಿಗರು. ಆದರೂ ದೇವಂಪಾಡಿ ಗ್ರಾಮಪಂಚಾಯತ್ ಉದ್ದೇಶಪೂರ್ವಕವಾಗಿ ಮಲಯಾಲಂ ಶಿಕ್ಷಕಿಯ ನೇಮಕ ಮಾಡಿದೆ. ಪಂಚಾಯತ್ ಕೇರಳ ಸರಕಾರದ ಶಿಕ್ಷಣ ಇಲಾಖೆಗೆ ವರದಿ ಕಳಿಸಿತ್ತು. ಈ ವರದಿಯ ಆಧಾರದಲ್ಲಿ ಮಲಯಾಳಂ ಶಿಕ್ಷಕಿಯನ್ನು ಕೇರಳ ಶಿಕ್ಷಣ ಇಲಾಖೆ ನೇಮಿಸಿದೆ‌. ಹಲವು ಬಾರಿ ಮನವಿ ಮಾಡಿದರೂ ಕನ್ನಡ ಸಂಘಟನೆಗಳನ್ನು ಕ್ಯಾರೇ ಮಾಡದ ಕೇರಳ ಶಿಕ್ಷಣ ಇಲಾಖೆ ಮಲಯಾಳಂ ಶಿಕ್ಷಕಿಯನ್ನು ನೇಮಕ ಮಾಡಿದೆ. ಈ ಹಿನ್ನೆಲೆಯಲ್ಲಿ ಪೋಷಕರು ಪ್ರತಿಭಟನೆ ನಡೆಸಿದ್ದಾರೆ‌.

Edited By : Nagesh Gaonkar
PublicNext

PublicNext

14/12/2024 07:27 am

Cinque Terre

5.74 K

Cinque Terre

0

ಸಂಬಂಧಿತ ಸುದ್ದಿ