ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾಲಯದ ನೂತನ ಘಟಕದ ಪದವಿ ಕಾಲೇಜು ಪ್ರಸಕ್ತ ವರ್ಷದಿಂದ ಮೂಡುಬಿದಿರೆ ತಾಲೂಕಿನ ಬನ್ನಡ್ಕದಲ್ಲಿ ಆರಂಭವಾಗಲಿದ್ದು ಮಂಗಳೂರು ವಿ.ವಿ.ಯಲ್ಲಿ ನೂತನ ಶೈಕ್ಷಣಿಕ ನೀತಿಯ ಅನುಷ್ಠಾನದ ಉದ್ಘಾಟನಾ ಸಮಾರಂಭದಲ್ಲಿ ಆಗಸ್ಟ್ 30ರಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ಅವರಿಂದ ಉದ್ಘಾಟನೆಗೊಳ್ಳಲಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬನ್ನಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಬಿ.ಬಿ.ಎಂ, ಬಿ.ಸಿ.ಎ ಮತ್ತು ಬಿ.ಕಾಂ ತರಗತಿಗಳನ್ನು ನಡೆಸಲಾಗುವುದು. ಪ್ರತೀ ಕೋರ್ಸಿಗೆ 60 ಮಂದಿಗೆ ಪ್ರವೇಶಾವಕಾಶ ದೊರೆಯಲಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಬಿ.ಎ, ಬಿ.ಎಸ್ಸಿ ಕೋರ್ಸುಗಳ ಆರಂಭಿಸುವ ಚಿಂತನೆಯಿದೆ. ಮೂಡುಬಿದಿರೆ ಆಸುಪಾಸಿನ ಅರ್ಹ ಬಡ ಶಿಕ್ಷಣಾಪೇಕ್ಷಿಗಳು ಇದರ ಪ್ರಯೋಜನ ಪಡೆಯಬಹುದು. ಸದ್ಯ ಘಟಕ ಕಾಲೇಜು ಪ್ರಾರಂಭಗೊಳ್ಳಲಿದ್ದು ಮುಂದಿನ ದಿನಗಳಲ್ಲಿ ಸ್ವಂತ ನಿವೇಶನದಲ್ಲಿ ಸರ್ಕಾರಿ ಕಾಲೇಜು ಸ್ಥಾಪನೆಯಾಗಲಿದೆ. ಅಳಿಯೂರಿನಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು ಕೂಡ ಸದ್ಯದಲ್ಲೇ ಆರಂಭಗೊಳ್ಳಲಿದೆ ಶಾಸಕರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ಉಪಾಧ್ಯಕ್ಷ ಸುಜಾತ, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಪುರಸಭೆ ಸದಸ್ಯ ರಾಜೇಶ್ ನಾಯ್ಕ್, ಮೂಡಾ ಅಧ್ಯಕ್ಷ ಮೇಘನಾಥ್ ಶೆಟ್ಟಿ, ಸದಸ್ಯರಾದ ಲಕ್ಷö್ಮಣ್ ಪೂಜಾರಿ, ಗೋಪಾಲ ಶೆಟ್ಟಿಗಾರ್, ಬಿಜೆಪಿ ಮುಖಂಡ ಅಭಿಲಾಷ್ ಶೆಟ್ಟಿ ಉಪಸ್ಥಿತರಿದ್ದರು.
Kshetra Samachara
28/08/2021 05:13 pm