ಶಿರ್ವ: ಪುಟಾಣಿಯೊಬ್ಬ ಕಂಬಳದ ಕೋಣಕ್ಕೆ ಮುತ್ತಿಟ್ಟು, ಕೋಣವನ್ನು ಪ್ರೀತಿಯಿಂದ ಕಂಬಳಕರೆಗೆ ಕಳುಹಿಸಿ ಕೊಡುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಉಡುಪಿಯ ಶಿರ್ವ ನಡಿಮೆಟ್ಟು ಸಾಂಪ್ರದಾಯಿಕ ಕಂಬಳ ಸ್ಪರ್ಧೆಯಲ್ಲಿ ಕಂಡು ಬಂದ ದೃಶ್ಯ ಇದಾಗಿದ್ದು, ಕಂಬಳಪ್ರಿಯರು ಪುಟ್ಟ ಬಾಲಕನ ಕಂಬಳಾಭಿಮಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನು ದೃಶ್ಯದಲ್ಲಿ ಕಾಣುತ್ತಿರುವಂತೆ, ಚಿಕ್ಕ ಹುಡುಗರೇ ಕೋಣವನ್ನು ಅನುಭವಿಗಳಂತೆ ಕಂಬಳಕರೆಗೆ ಕರೆದುಕೊಂಡು ಹೋಗುವುದು ಕೂಡ ಈ ವೀಡಿಯೊದ ಇನ್ನೊಂದು ವಿಶೇಷತೆ. ಹಲವು ಕಂಬಳಾಭಿಮಾನಿಗಳ ಸ್ಟೇಟಸ್ ನಲ್ಲೂ ಈ ವೀಡಿಯೊ ರಾರಾಜಿಸುತ್ತಿವೆ.
Kshetra Samachara
01/12/2021 06:02 pm