ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಎಸ್‌ಡಿಎಂ ಕಾನೂನು ಕಾಲೇಜಿನ ಸುವರ್ಣ ಪಥ ಕಾನೂನು ಶಿಕ್ಷಣದ ವಿಕಸನಕ್ಕೆ ಹಿಡಿದ ಕೈಗನ್ನಡಿ - ಡಾ. ವೆಂಕಟ್ರಮಣಿ

ಮಂಗಳೂರು: ಎಸ್‌ಡಿಎಂ ಕಾನೂನು ಕಾಲೇಜು 50ನೇ ವರ್ಷಾಚರಣೆ ಮಾಡುತ್ತಿರುವುದು ಸಂತಸ ತಂದಿದೆ. ಸುವರ್ಣ ಪಥ ಕಾರ್ಯಕ್ರಮ ಕಾನೂನು ಶಿಕ್ಷಣದ ವಿಕಸನಕ್ಕೆ ಹಿಡಿದ ಕೈಗನ್ನಡಿ. ತಾನು ಈ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿರುವುದು ನನಗೆ ಹೆಮ್ಮೆಯ ಸಂಗತಿ ಎಂದು ಭಾರತದ ಅಟಾರ್ನಿ ಜನರಲ್ ಡಾ. ವೆಂಕಟ್ರಮಣಿ ಸಂತಸ ವ್ಯಕ್ತಪಡಿಸಿದರು.

ಮಂಗಳೂರು ನಗರದ ಎಸ್‌ಡಿಎಂ ಕಾನೂನು ಕಾಲೇಜಿನ ಸುವರ್ಣ ಮಹೋತ್ಸವ ಸಂಭ್ರಮದ ಅಂಗವಾಗಿ ನಗರದ ಟಿ.ಎಂ.ಎ. ಪೈ ಸಭಾಂಗಣದಲ್ಲಿ ಪೂರ್ವ ವಿದ್ಯಾರ್ಥಿ ಪುನರ್ ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಏಷ್ಯಾದಲ್ಲಿ ಕಾನೂನು ಶಿಕ್ಷಣ ಗಮನಾರ್ಹವಾಗಿ ಬೆಳೆದಿದೆ. ಕಾನೂನು ಶಿಕ್ಷಣದ ವಿಕಸನದಲ್ಲಿ ಹೆಗ್ಗಡೆಯವರ ಪಾತ್ರ ಮಹತ್ತರವಾದದ್ದು. ಅವರ ದೂರದೃಷ್ಟಿತ್ವದಿಂದ ಸಾಮಾನ್ಯರಿಗೂ ಕಾನೂನು ಶಿಕ್ಷಣ ಪಡೆಯುವುದು ಸಾಧ್ಯವಾಗಿದೆ. ಎಸ್‌ಡಿಎಂ ಸಂಸ್ಥೆಯ ಗುಣಮಟ್ಟದ ಶಿಕ್ಷಣದಿಂದ ಅಸಂಖ್ಯಾತ ವಿದ್ಯಾರ್ಥಿಗಳು ಕಾನೂನು ಶಿಕ್ಷಣ ಪಡೆಯುತ್ತಿದ್ದಾರೆ. ಇಲ್ಲಿನ ಶಿಕ್ಷಣ ವ್ಯವಸ್ಥೆ ಅನೇಕರನ್ನು ಪ್ರೇರೇಪಿಸುತ್ತಿದೆ ಎಂದರು.

ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳು ಪಠ್ಯ ಪುಸ್ತಕಗಳ ಕಲಿಕೆಯೊಂದಿಗೆ ಕ್ರೀಡೆ, ಸೃಜನಾತ್ಮಕ ಕಲಿಕೆಗೂ ಒತ್ತುನೀಡುತ್ತುದೆ. ಈ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಬಹುದಾದ ವಿದ್ಯಾರ್ಥಿಗಳನ್ನು ರೂಪಿಸುತ್ತಿದೆ. ಒಂದು ಕಾಲದಲ್ಲಿ ಕಡಿಮೆ ಕಿಮ್ಮತ್ತು ಹೊಂದಿದ್ದ ವಕೀಲ ವೃತ್ತಿ ಇಂದು ಅತ್ಯಂತ ಗೌರವಾನ್ವಿತ ಹುದ್ದೆಗಳಲ್ಲಿ ಒಂದಾಗಿದೆ. ಕಾನೂನು ಶಿಕ್ಷಣದ ಪ್ರಾಮುಖ್ಯತೆಯನ್ನು ಅರಿತು ಕಾನೂನು ಕಾಲೇಜು ಆರಂಭಿಸಿ ಇದೀಗ ಕಾಲೇಜು ಯಶಸ್ವಿ 50 ವರ್ಷ ಪೂರೈಸಿದೆ. ಈ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳೆಲ್ಲ ಒಳ್ಳೆಯ ಹುದ್ದೆಯನ್ನು ಅಲಂಕರಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಹೆಚ್ಚುವರಿ ಅಡ್ವೊಕೇಟ್ ಜನರಲ್ ಶಾಹುಲ್ ಹಮೀದ್ ರಹಮಾನ್, ಕೇರಳದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಆಂಟೋನಿ ಡೊಮಿನಿಕ್, ಕರ್ನಾಟಕ ಹೈಕೋರ್ಟ್ (ನಿ) ಮೈಕೆಲ್ ಡಿಕುನ್ಹಾ , ನಿವೃತ್ತ ಐಎಎಸ್ ಅಧಿಕಾರಿ ಶಾಮ್ ಭಟ್, ಸಿಂಬಯಾಸಿಸ್ ಕಾನೂನು ಶಾಲೆ ನಿರ್ದೇಶಕಿ ಡಾ. ಶಶಿಕಲಾ ಗುರುಪುರ್ ಸೇರಿದಂತೆ ಪ್ರಮುಖ ಗಣ್ಯರು ಕಾನೂನು ದಿಗ್ಗಜರು,ಕಾಲೇಜಿನ ಹಳೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Edited By : Abhishek Kamoji
PublicNext

PublicNext

15/12/2024 07:01 pm

Cinque Terre

7.77 K

Cinque Terre

0

ಸಂಬಂಧಿತ ಸುದ್ದಿ