ಬ್ರಹ್ಮಾವರ : ಅಜಪುರ ಕರ್ನಾಟಕ ಸಂಘ ಬ್ರಹ್ಮಾವರ ಇದರ ವತಿಯಿಂದ ದಿವಂಗತ ಸದಾಶಿವ ರಾವ್ ಸ್ಮರಣಾರ್ಥ ಸಂಗೀತೋತ್ಸವ ಮತ್ತು ಸನ್ಮಾನ ಕಾರ್ಯಕ್ರಮ ಶನಿವಾರ ಸಂಜೆ ಮಹಾತೋಭಾರ ಶ್ರೀ ಮಹಾಲಿಂಗೇಶ್ವರದೇವಸ್ಥಾನದ ವಠಾರದಲ್ಲಿ ಜರುಗಿತು.
ಅಜಪುರ ಕರ್ನಾಟಕ ಸಂಘದ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಹಾರಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿಭಾರತೀಯ ಸಂಗೀತಕ್ಕೆ ಪರ್ಯಾಯ ವಿದ್ಯೇ ಪ್ರಪಂಚದಲ್ಲಿ ಇಲ್ಲ ಎಂದರು. ಇದೇ ಸಂದರ್ಭದಲ್ಲಿ ಸಂಗೀತ ಸಾಧಕಿ ಗೀತಾತುಂಗಾ ಮತ್ತು ಉಡುಪಿ ನಗರಾಭಿವೃದ್ಧಿ ಪ್ರಾಧಿಕರಾದ ಅಧ್ಯಕ್ಷ ದಿನಕರ ಹೇರೂರು ಇವರನ್ನು ಸನ್ಮಾನಿಸಲಾಯಿತು.
ಕನ್ನಡ ಭಾಷೆ, ಕಲೆ, ಸಂಸ್ಕೃತಿ, ಕ್ರೀಡೆಯಲ್ಲಿ ಸಾಧನೆ ಮಾಡಿದ 6 ಮಂದಿಯನ್ನು ಗೌರವಿಸಲಾಯಿತು.ಕನ್ನಡ ಭಾಷೆಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹನೆರವು ನೀಡಲಾಯಿತು. ಬ್ರಹ್ಮಾವರ ಹಿರೀಯ ನಾಗರೀಕ ವೇದಿಕೆಯ ಅಧ್ಯಕ್ಷ ಭಾಸ್ಕರ್ ಶೆಟ್ಟಿ, ಸಹಕಾರಿ ಧುರೀಣ ಅಶೋಕ್ ಶೆಟ್ಟಿ ಮೈರ್ಮಾಡಿ ಸಂಘದ ಕಾರ್ಯದರ್ಶಿ ದಿನಕರ ಶೆಟ್ಟಿ ಬೈಕಾಡಿ ಉಪಸ್ಥಿತರಿದ್ದರು.ಸಭಾಕಾರ್ಯಕ್ರಮದಬಳಿಕ ಲಹರಿ ಸಂಗೀತ ಭಳಗದವರಿಂದ ಭಕ್ತಿ ಸಂಗೀತ ಜರುಗಿತು.
Kshetra Samachara
15/12/2024 05:32 pm