ಕುಂದಾಪುರ: ವಿಟ್ಲದ ಕನ್ಯಾನದಲ್ಲಿ ಅಪ್ರಾಪ್ತ ಬಾಲಕಿಯನ್ನು ಲವ್ ಜಿಹಾದ್ ಬಳಸಿ ಕೊಲೆ ಮಾಡಿದ ಸಂಶಯವಿದೆ ಎನ್ನುವ ಕಾರಣಕ್ಕೆ ಬಾಲಕಿಯ ಸಾವಿನ ಸೂಕ್ತ ತನಿಖೆಗೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಕುಂದಾಪುರ ಶಾಸ್ತ್ರೀ ಸರ್ಕಲ್ ಬಳಿ ಪ್ರತಿಭಟನೆ ನೆಡೆಯಿತು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಬಜರಂಗದಳ ಜಿಲ್ಲಾ ಸಂಚಾಲಕ ಸುರೇಂದ್ರ ಮಾರ್ಕೋಡು ಕರ್ನಾಟಕದಲ್ಲಿ 2008-2013 ತನಕ ಒಟ್ಟು 30,000ಕ್ಕೂ ಹೆಚ್ಚು ಜನ ಯುವತಿಯರು ಕಾಣೆಯಾಗಿದ್ದಾರೆ ಎನ್ನುವ ಮಾಹಿತಿಯನ್ನು ಕಳೆದ ವಿಧಾನಸಭೆಯಲ್ಲಿ ಕಾಂಗ್ರೆಸ್ ಎಂ. ಎಲ್.ಎ ಶಕುಂತಲಾ ಶೆಟ್ಟಿಯವರು ನೀಡಿದ್ದರು.
ಶಕುಂತಲಾರವರು ಪ್ರಸ್ತಾಪಿಸಿದ ಯುವತಿಯರ ನಾಪತ್ತೆ ಪ್ರಕರಣದ ಕೇಸ್ ಗಳು ಲವ್ ಜಿಹಾದ್ ಗೆ ಸಂಬಂಧಪಟ್ಟಿದೆ ಎಂದರು.
PublicNext
09/05/2022 08:29 pm