ಮಂಗಳೂರು: ಸುಳ್ಯದ ನೆಟ್ಟಾರುವಿನಲ್ಲಾದ ಹಿಂದೂ ಕಾರ್ಯಕರ್ತನ ಕೊಲೆಯಾಗಿದ್ದು, ಶವ ಇಟ್ಟು ರಾಜಕೀಯ ಮಾಡಿದ ನಾಯಕರುಗಳು ನಾಪತ್ತೆಯಾಗಿದ್ದಾರೆಂದು ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಹಿಂದೂಗಳ ರಕ್ಷಣೆಯ ಹೆಸರಲ್ಲಿ ಅಧಿಕಾರ ಹಿಡಿಯಲು ಓಟ್ ಬ್ಯಾಂಕ್ ಮಾಡುವ ಬಿಜೆಪಿ ನಾಯಕರು ದ.ಕ.ಜಿಲ್ಲೆಯಲ್ಲಿ ಮತ್ತೊಮ್ಮೆ ಶವ ರಾಜಕೀಯ ಮಾಡಲು ಹೊರಟಿದ್ದಾರೆ.
ಈ ಹತ್ಯೆಯ ಬಗ್ಗೆ ಪೊಲೀಸ್ ತನಿಖೆ ಆಗುವ ಮೊದಲೇ ಮುಸ್ಲಿಮರ ತಲೆಗೆ ಕಟ್ಟುವ ಪ್ರಯತ್ನ ನಡೆಯುತ್ತಿದೆ. ಪ್ರಮೋದ್ ಮುತಾಲಿಕ್ ನಂತಹ ಅರೆ ಹುಚ್ಚ ಶಾಂತಿ ಕೆದಡುವ ಕಾರ್ಯದಲ್ಲಿದ್ದು, ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠರು ಸೂಕ್ತ ಕ್ರಮ ಕೈಗೊಂಡು ಆತನನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಕ್ರಿಯೆಗೆ ಪ್ರತಿಕ್ರಿಯೆ ಎಂದು ಹೇಳಿಕೆ ನೀಡಿರುವ ಸಿಎಂ ಬೊಮ್ಮಯಿ ತಮ್ಮ ನೈತಿಕತೆಯನ್ನು ಕಳೆದುಕೊಂಡಿದ್ದಾರೆ. ತಕ್ಷಣ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಹಿಂದೂಗಳಿಗೆ ರಕ್ಷಣೆ ನೀಡುತ್ತೇವೆಂದು ಅಧಿಕಾರ ಹಿಡಿದಿರುವ ಬಿಜೆಪಿ ಕೇಂದ್ರದಲ್ಲಿ, ರಾಜ್ಯದಲ್ಲಿ ಅಧಿಕಾರದಲ್ಲಿದ್ದರೂ ಹಿಂದೂಗಳ ಕೊಲೆ ನಡೆಯುತ್ತಿದೆ. ಆದ್ದರಿಂದ ಇವರಿಗೆ ಅಧಿಕಾರದಲ್ಲಿರಲು ಯಾವ ನೈತಿಕತೆಯಿದೆ ಎಂದು ಆಗ್ರಹಿಸಿದರು.
PublicNext
27/07/2022 04:00 pm