ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳಕ್ಕೂ ತಟ್ಟಿದ ಕೆ.ಎಸ್.ಆರ್.ಟಿ.ಸಿ. ಮುಷ್ಕರ ಬಿಸಿ

ಬಂಟ್ವಾಳ: ಕೆ.ಎಸ್.ಆರ್.ಟಿ.ಸಿ. ನೌಕರರ ಮುಷ್ಕರ ಬಂಟ್ವಾಳದಲ್ಲೂ ತಟ್ಟಿದೆ. ಬಂಟ್ವಾಳದ ಡಿಪೊಕ್ಕೆ ನೌಕರರು ಕೆಲಸಕ್ಕೆ ಹಾಜರಾಗದೇ ಮುಷ್ಕರಕ್ಕೆ ಬೆಂಬಲ ಸೂಚಿಸಿದರು.

ಈ ವೇಳೆ ಮಾತನಾಡಿದ ಬಂದ್ ಬೆಂಬಲಿಸುವ ನೌಕರರು, ನಮ್ಮನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಿ, ಇತರ ಇಲಾಖೆಗಳಿಗೆ ಕೊಡುವಂತೆ ನಮಗೂ ಸವಲತ್ತುಗಳನ್ನು ಕೊಡಬೇಕು, ಇದುವರೆಗೆ ಒತ್ತಾಯಪೂರ್ವಕ ಮನವಿ ಮಾಡುತ್ತಾ ಬಂದಿದ್ದೇವೆ. ಯಾವ ರೀತಿಯಲ್ಲೂ ಯಾರಿಗೂ ತೊಂದರೆ ಕೊಡದಂತೆ, ಜನರಿಗೆ ತೊಂದರೆಯಾಗದಂತೆ ನಾವು ಮುಷ್ಕರ ಮಾಡುತ್ತೇವೆ.

ಸರಕಾರ ನಮ್ಮ ಕಷ್ಟಗಳನ್ನು ಪರಿಗಣಿಸಿ, ನಮಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸುತ್ತಿದ್ದೇವೆ. ನಮಗೆ ಯಾರೂ ನಾಯಕರು ಇಲ್ಲಿಲ್ಲ, ನಮಗೆ ನಾವೇ ನಾಯಕರು ಎಮದು ಹೇಳಿದ ನೌಕರರು, ಸ್ವಯಂಪ್ರೇರಿತರಾಗಿ ಬಂದ್ ಮಾಡಿದ್ದೇವೆ ಎಂದು ಹೇಳಿದರು. ಬಂದ್ ಹಿನ್ನೆಲೆಯಲ್ಲಿ ಯಾವುದೇ ಬಸ್ಸುಗಳು ಇಂದು ಬಿ.ಸಿ.ರೋಡಿನ ಡಿಪೊದಿಂದಲೂ ರಸ್ತೆಗಿಳಿಯಲಿಲ್ಲ.

Edited By :
Kshetra Samachara

Kshetra Samachara

12/12/2020 07:06 pm

Cinque Terre

25.47 K

Cinque Terre

2

ಸಂಬಂಧಿತ ಸುದ್ದಿ