ಉಡುಪಿ: ನನ್ನನ್ನು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಮುಖ್ಯಮಂತ್ರಿಗಳು ನೇಮಕ ಮಾಡಿದ್ದಾರೆ. ಇದೊಂದು ರಾಜಕೀಯೇತರ ಹುದ್ದೆ.
ಸಮಿತಿ ಸದಸ್ಯರ ನೇಮಕ ಮುಂದೆ ಆಗಲಿದೆ.ಈ ಹಿಂದಿನ ಎಲ್ಲ ವರದಿಗಳನ್ನು ಅಧ್ಯಯನ ಮಾಡುತ್ತೇನೆ. ರಾಜ್ಯಾದ್ಯಂತ ಓಡಾಡಿ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುತ್ತೇನೆ ಎಂದು ಮಾಜಿ ಸಚಿವ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡ ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ಅಧಿಕಾರ ಇಲ್ಲದಿದ್ದಾಗಲೂ ನಾನು ಜನರ ಜೊತೆ ಇದ್ದೆ. ಹುದ್ದೆಯಲ್ಲಿ ಇಲ್ಲದಿದ್ದರೂ ಕೆಲಸ ಮಾಡುವ ಶಕ್ತಿ ಬೆಳೆಸಿಕೊಂಡಿದ್ದೇನೆ.
ಜನರ ಕೆಲಸ ಮಾಡಲು ಹುದ್ದೆಯೇ ಬೇಕಾಗಿಲ್ಲ.
ಒಂದು ಪಕ್ಷದ ಪ್ರತಿನಿಧಿಯಾಗಿ ನಾನು ನೇಮಕವಾಗಿಲ್ಲ. ಪಕ್ಷ ರಹಿತವಾಗಿ ಹಿಂದುಳಿದ ವರ್ಗಗಳ ಧ್ವನಿಯಾಗಿ ಕೆಲಸ ಮಾಡುತ್ತೇನೆ.
ರಾಜಕೀಯ ಕೆಲಸಗಳನ್ನು ಶಾಸಕನಾಗಿ, ಮಂತ್ರಿಯಾಗಿ, ಸಂಸದನಾಗಿ ಮಾಡಿದ್ದೆ. ಈಗ ರಾಜಕೀಯೇತರವಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
Kshetra Samachara
24/11/2020 11:21 am