ಮುಲ್ಕಿ: ಸುದೀರ್ಘ ಕಾಲದ ಇತಿಹಾಸ ಹೊಂದಿರುವ ಮತ್ತು ಜನಪರ ಕಾರ್ಯಕ್ರಮಗಳನ್ನು ನೀಡಿ ಬಡವರ ಮನಗೆದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಸದಸ್ಯರಾಗಿ ಆಯ್ಕೆಯಾಗಲಿ ಎಂದು ಮುಲ್ಕಿ-ಮೂಡಬಿದ್ರೆ ಗ್ರಾಮ ಪಂಚಾಯತ್ ಚುನಾವಣೆಗಳ ಉಸ್ತುವಾರಿ ಮಿಥುನ ರೈ ತಿಳಿಸಿದರು.
ಅವರು ಮುಲ್ಕಿ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಕೆಮ್ರಾಲ್ ಗ್ರಾಮ ಪಂಚಾಯಿತಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು ವಹಿಸಿದ್ದರು. ಮುಲ್ಕಿ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿ ದೀಪಕ್ ಪೂಜಾರಿ, ಕೆಪಿಸಿಸಿ ಕೋಆರ್ಡಿನೇಟರ್ ವಸಂತ ಬೆರ್ನಾರ್ಡ್, ವಲಯಧ್ಯಕ್ಷ ಪ್ರವೀಣ್ ಕುಮಾರ್ ಬೋಳ್ಳೂರು, ಸ್ಥಳೀಯ ಮುಖಂಡರಾದ ಸುರೇಶ್ ಪಂಜ, ಮಯ್ಯದಿ ಪಕ್ಷಿಕೆರೆ, ಸಿಪ್ರಿಯನ್ ಮಾಸ್ಟರ್, ಲೀಲಾ ವತಿ, ರೇವತಿ, ಜಾಕ್ಸನ್ ಮೊದಲಾದವರು ಇದ್ದರು.
Kshetra Samachara
24/11/2020 09:42 am