ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ತೇಜೋವಧೆ ಬದಲು ತನ್ನ ವಿರುದ್ಧ ಆರೋಪಕ್ಕೆ ಹರಿಕೃಷ್ಣ ಬಂಟ್ವಾಳ್ ಸಾಕ್ಷ್ಯ ಒದಗಿಸಲಿ: ರಮಾನಾಥ ರೈ

ಬಂಟ್ವಾಳ: ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್ ತನ್ನ ಹೆಸರು ಹೇಳಿ ತೇಜೋವಧೆ ಮಾಡುತ್ತಿದ್ದು, ಅವರು ಮಾಡುವ ಆರೋಪಗಳಿಗೆ ಸಾಕ್ಷ್ಯ ಒದಗಿಸಲಿ, ಬಂಟ್ವಾಳ ಪುರಸಭೆಗೆ ಎಸ್.ಡಿ.ಪಿ.ಐ. ಜೊತೆ ಹೊಂದಾಣಿಕೆಗೆ ಗುಪ್ತ ಸಭೆ ಮಾಡಿದ್ದಾರೆ ಎಂದು ಆಪಾದಿಸಿದ್ದಕ್ಕೆ ಸಾಕ್ಷ್ಯ ನೀಡಲಿ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಸವಾಲೆಸೆದಿದ್ದಾರೆ.

ಬಂಟ್ವಾಳದ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ಬಂಟ್ವಾಳ ಪುರಸಭೆಯಲ್ಲಿ ಎಸ್.ಡಿ.ಪಿ.ಐ. ಸದಸ್ಯೆಯನ್ನು ಸ್ಥಾಯಿ ಸಮಿತಿ ಅಧ್ಯಕ್ಷೆ ಮಾಡಿದ್ದನ್ನು ಬಿಜೆಪಿ ನೆನಪು ಮಾಡಿಕೊಳ್ಳಲಿ ಎಂದರು.

ನಾನು ಈವರೆಗೆ ಹರಿಕೃಷ್ಣ ಬಂಟ್ವಾಳ್ ಅಥವಾ ಶಾಸಕ ರಾಜೇಶ್ ನಾಯ್ಕ್ ಹೆಸರು ಹೇಳಿ ಎಲ್ಲೂ ಆಪಾದನೆ ಮಾಡಿಲ್ಲ, ಯಾರ ವೈಯಕ್ತಿಕ ಅಥವಾ ಕುಟುಂಬದ ಚಾರಿತ್ರ್ಯಹನನ ಮಾಡುವ ಕೆಲಸ ಮಾಡಿಲ್ಲ. ಆದರೆ ತನ್ನ ಬಗ್ಗೆ ಅವಹೇಳನ ಮಾಡಲಾಗುತ್ತಿದೆ. ತನ್ನ ಡಿ.ಎನ್.ಎ. ಕುರಿತ ಹೇಳಿಕೆಯನ್ನೂ ನೀಡಲಾಗಿದ್ದು, ಅತಿ ಹೀನಾಯವಾಗಿ ತನ್ನನ್ನು ದೂರಲಾಗುತ್ತಿದೆ ಎಂದು ರೈ ಹೇಳಿದರು.

ಕೆಲ ವರ್ಷಗಳ ಅವಧಿಯಲ್ಲಿ ಶರತ್ ಮಡಿವಾಳ, ನಾಸಿರ್, ಆಶ್ರಫ್ , ಹರೀಶ್ ಪೂಜಾರಿ, ಭಾರತಿ , ಅಬ್ದುಲ್ಲ ಈ ರೀತಿ ಅನೇಕರ ಹತ್ಯೆಗಳು ಆಗಿದೆ. ಈ ಪೈಕಿ ಭಾರತಿ ಹಾಗೂ ಅಬ್ದುಲ್ಲ ಕೊಲೆ ಪ್ರಕರಣದ ತನಿಖೆ ಸರಿಯಾಗಿ ಆಗಿಲ್ಲ ಎಂದು ಅಂದು ಬಿಜೆಪಿಯೇ ಹೇಳಿತ್ತು. ಆಗ ಬಿಜೆಪಿ ಯಾರನ್ನು ದೂರಿತ್ತು ಎಂಬುದನ್ನು ನೆನಪು ಮಾಡಿಕೊಳ್ಳಲಿ ಎಂದು ಹೇಳಿದ ರೈ, ಹರಿಕೃಷ್ಣ ಬಂಟ್ವಾಳ್ ಕಾಂಗ್ರೆಸ್ ಗೆ ವಿಶ್ವಾಸದ್ರೋಹವೆಸಗಿದ್ದಾರೆ. ಬಿಜೆಪಿಯ ನಾಯಕರೂ ಇದನ್ನು ಅರ್ಥ ಮಾಡಿಕೊಳ್ಳಲಿ ಎಂದರು.

ಶಾಸಕರೊಬ್ಬರ ಸಂಬಂಧಿಯ ಪರವಾನಗಿ ಹೆಸರಲ್ಲಿ ರೆಡ್ ಬಾಕ್ಸೈಟ್ ಗಣಿಗಾರಿಕೆ ಕುರಿತು ತಾನು ಆರೋಪ ಮಾಡಿದ್ದೇನೆ. ಆದರೆ ಯಾರ ಹೆಸರನ್ನೂ ತಾನು ಹೇಳಿಲ್ಲ ಎಂದು ಹೇಳಿದ ರೈ, ಕಲ್ಲಡ್ಕ ಶಾಲೆಗೆ ಕೊಲ್ಲೂರು ದೇವಸ್ಥಾನದಿಂದ ಪ್ರತೀ ತಿಂಗಳು ಬರುತ್ತಿದ್ದ ನಾಲ್ಕು ಲಕ್ಷ ದೇವರ ಹುಂಡಿಯ ಹಣವನ್ನು ನಿಲ್ಲಿಸಿದ್ದೇನೆಯೇ ಹೊರತು ಅಕ್ಕಿ ಬರುವುದನ್ನು ನಿಲ್ಲಿಸಿಲ್ಲ. ಅದರಲ್ಲೂ ತನ್ನ ವಿರುದ್ಧ ಅಪಪ್ರಚಾರ ಮಾಡಲಾಯಿತು ಎಂದರು. ಸುದ್ದಿಗೋಷ್ಠಿಯಲ್ಲಿ ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್, ಉಪಾಧ್ಯಕ್ಷೆ ಜೆಸಿಂತಾ, ಜಿಪಂ ಸದಸ್ಯರಾದ ಎಂ.ಎಸ್.ಮಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ, ಬೇಬಿ ಕುಂದರ್, ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ಪ್ರಮುಖರಾದ ಪ್ರಶಾಂತ್ ಕುಲಾಲ್, ಮಾಯಿಲಪ್ಪ ಸಾಲ್ಯಾನ್ ಮೊದಲಾದವರಿದ್ದರು.

Edited By : Nagesh Gaonkar
Kshetra Samachara

Kshetra Samachara

10/11/2020 06:01 pm

Cinque Terre

34.49 K

Cinque Terre

5

ಸಂಬಂಧಿತ ಸುದ್ದಿ