ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿಯಲ್ಲಿ ಬೆಂಬಲ ಬೆಲೆ ಭತ್ತ ಕೇಂದ್ರ ಶೀಘ್ರ ತೆರೆಯಲು ಸೂಚನೆ- ಸಚಿವೆ ಶೋಭಾ

ಕೋಟ: ಭತ್ತಕ್ಕೆ ಕೇಂದ್ರ ಸರಕಾರ ಬೆಂಬಲ ಬೆಲೆಯನ್ನು ನಿಗದಿಗೊಳಿಸುತ್ತದೆ. ಆದರೆ ಖರೀದಿ ಕೇಂದ್ರವನ್ನು ಸ್ಥಾಪಿಸಿ ರೈತರಿಂದ ಭತ್ತವನ್ನು ಖರೀದಿ ಮಾಡಬೇಕಾದದ್ದು ರಾಜ್ಯ ಸರಕಾರದ ಕರ್ತವ್ಯವಾಗಿದೆ. ಉಡುಪಿ ಜಿಲ್ಲೆಯಲ್ಲಿ ಪ್ರತಿ ವರ್ಷ ಬೆಂಬಲ ಬೆಲೆ ಕೇಂದ್ರ ತೆರೆಯುವುದು ತಡವಾಗುವುದರಿಂದ ಸಮಸ್ಯೆಯಾಗುತ್ತಿದೆ ಎನ್ನುವ ದೂರುಗಳು ಕೇಳಿ ಬರುತ್ತಿದ್ದು ಈ ಬಾರಿ ಶೀಘ್ರವಾಗಿ ತೆರೆಯುವಂತೆ ರಾಜ್ಯ ಕೃಷಿ ಸಚಿವರಿಗೆ ತತ್ಕ್ಷಣ ಸೂಚನೆಯನ್ನು ನೀಡುತ್ತೇನೆ ಎಂದು ಕೇಂದ್ರ ಸರಕಾರದ ಕೃಷಿ ಇಲಾಖೆ ಸಹಾಯಕ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ಆವರು ಇಂದು ಕೋಟದಲ್ಲಿ ಜಿಲ್ಲಾ ಹಾಗೂ ಕುಂದಾಪುರ ಕ್ಷೇತ್ರ ಬಿಜೆಪಿ ಮಹಿಳಾ ಮೋರ್ಚಾ ಆಶ್ರಯದಲ್ಲಿ ಪ್ರದಾನಿ ನರೇಂದ್ರ ಮೋದಿ ಜನ್ಮದಿನಾಚರಣೆ ಪ್ರಯುಕ್ತ ಜರಗಿದ ಕಣ್ಣಿನ ತಪಾಸಣೆ ಶಿಬಿರಕ್ಕೆ ಆಗಮಿಸಿದ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದರು.

ಮಧ್ಯವರ್ತಿಗಳ ಹಾವಳಿ ತಡೆಗೆ ಕೂಡ ಸೂಕ್ತ ಕ್ರಮ ಅಗತ್ಯವಿದ್ದು ಖರೀದಿ ಕೇಂದ್ರ ಆರಂಭಿಸಿದರೆ ಮಧ್ಯವರ್ತಿಗಳ ಸಮಸ್ಯೆ ಸ್ವಲ್ಪ ಮಟ್ಟಿಗೆ ಪರಿಹಾರವಾಗಲಿದೆ ಎಂದರು.

ಬೆಂಬಲ ಬೆಲೆಗಿಂತ ಕಡಿಮೆಗೆ ಭತ್ತವನ್ನು ಯಾರೂ ಖರೀದಿಸದಂತೆ ಸರಕಾರದಿಂದ ಸುಗ್ರವಾಜ್ಞೆ ಹೊರಡಿಸಬೇಕು. ರಾಸಾಯನಿಕ ಗೊಬ್ಬರದ ದರ ಕಡಿತಗೊಳಿಸಬೇಕು, ಕೃಷಿ ಯಂತ್ರಧಾರೆ ಕೇಂದ್ರದಲ್ಲಿ ಯಂತ್ರಗಳ ಸಂಖ್ಯೆ ಹೆಚ್ಚಿಸಬೇಕು ಎಂದು ಕೋಟ ರೈತಧ್ವನಿ ಸಂಘಟನೆ ವತಿಯಿಂದ ಈ ಸಂದರ್ಭ ಸಚಿವರಿಗೆ ಮನವಿ ಸಲ್ಲಿಸಲಾಯಿತು.

Edited By : Manjunath H D
Kshetra Samachara

Kshetra Samachara

17/09/2021 06:50 pm

Cinque Terre

8.33 K

Cinque Terre

0

ಸಂಬಂಧಿತ ಸುದ್ದಿ