ಬೈಂದೂರು : ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕಿರಿಮಂಜೇಶ್ವರದ ಶುಭದಾ ಆಂಗ್ಲಮಾಧ್ಯಮ ಪ್ರೌಢಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳು ಹೆರಂಜಾಲಿನ ಪ್ರಗತಿಪರ ಕೃಷಿಕರಾದ ಗಣಪ ದೇವಾಡಿಗ ಇವರ ಕೃಷಿಭೂಮಿಯಲ್ಲಿ ಸ್ವಯಂ ಪ್ರೇರಿತರಾಗಿ ತುಂತುರು ಮಳೆಯಲ್ಲಿ ಸ್ವತಃ ಭತ್ತದ ಪೈರುಗಳನ್ನು ನಾಟಿಮಾಡಿದರು ಸಾಮಾನ್ಯ ನಾಟಿಪದ್ಧತಿಗೆ ಕೂಲಿಯಾಳುಗಳ ಕೊರತೆ ಇರುವ ಸನ್ನಿವೇಶದಲ್ಲಿ ವಿದ್ಯಾರ್ಥಿಗಳು ಕೃಷಿಯಲ್ಲಿ ಆಸಕ್ತಿ ತೋರುತ್ತಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಅದೇ ರೀತಿ ಕೃಷಿಭೂಮಿಯ ಮಾಲಕರಿಂದ ಭತ್ತದ ನೇಜಿ ಹಾಗೂ ಕೃಷಿ ಚಟುವಟಿಕೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆದರು ಶಾಲೆಯ ಮುಖ್ಯಶಿಕ್ಷಕ ರವಿದಾಸ್ ಶೆಟ್ಟಿ, ಆಡಳಿತ ಮಂಡಳಿಯ ಸದಸ್ಯರಾದ ಆರ್ ಕೆ ಬಿಲ್ಲವ,ಶಿಕ್ಷಕಿಯರಾದ ರೋಸಮ್ಮ,ಗಾಯತ್ರಿ ,ಪ್ರೀತಮ್ ಶೆಟ್ಟಿ,ಅನಿತಾ ಮತ್ತು ಬೋಧಕೇತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
Kshetra Samachara
05/07/2022 08:50 am