ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಅನಿಲ ಸೋರಿಕೆ ಸಂದರ್ಭದ ಅಣಕು ಪ್ರದರ್ಶನ, ಪ್ರಾತ್ಯಕ್ಷಿಕೆ !

ಕೈಗಾರಿಕೆಗಳಲ್ಲಿ ಅನಿಲ ಸೋರಿಕೆಯಿಂದ ವಿಪತ್ತು ಸಂಭವಿಸಿದಾಗ ವಿಪತ್ತು ನಿರ್ವಹಣೆಯ ತಂಡ ಹಾನಿಗೊಳಗಾದರನ್ನು ಮತ್ತು ಸಾರ್ವಜನಿಕರನ್ನು ಯಾವ ರೀತಿಯಲ್ಲಿ ರಕ್ಷಣೆ ಮಾಡಿ ಸುರಕ್ಷಿತ ಪ್ರದೇಶಕ್ಕೆ ಸಾಗಿಸುತ್ತಾರೆ ಎಂಬ ಕುರಿತು ಅಣಕು ಪ್ರದರ್ಶನ ನಡೆಯಿತು. ಆ್ಯಂಬುಲೆನ್ಸ್‌ಗಳ ಶರವೇಗದ ಸಂಚಾರ, ಅಗ್ನಿಶಾಮಕ ತಂಡದ ರಕ್ಷಣಾ ಕಾರ್ಯ ಸಹಿತ ಹಲವು ಚಟುವಟಿಕೆಗಳ ಪ್ರಾತ್ಯಕ್ಷಿಕೆಯನ್ನು ಜಿಲ್ಲಾ ಅಗ್ನಿಶಾಮಕ ದಳ ನಡೆಸಿಕೊಟ್ಟಿತು.

ಕುದಿ ಗ್ರಾಮದ ವಿಜಿಸ್‌ ಎಲ್‌ಪಿಜಿ ಇಂಡಸ್ಟ್ರಿಯನ್ನು ಇದಕ್ಕಾಗಿ ಆಯ್ದುಕೊಳ್ಳಲಾಗಿತ್ತು. ಇಲ್ಲಿ ಅನಿಲ ಸೋರಿಕೆ ಉಂಟಾಗಿ ಸುತ್ತಲಿನ ಜನರಲ್ಲಿ ಉಸಿರಾಟದ ತೊಂದರೆ ಹಾಗೂ ಅಸ್ವಸ್ಥತೆ ಕಾಣಿಸಿಕೊಂಡಿತ್ತು. ಜಿಲ್ಲಾ ವಿಪತ್ತು ನಿರ್ವಹಣೆ ಸಹಾಯ ವಾಣಿ 1077ಗೆ ಘಟನೆ ಬಗ್ಗೆ ಮಾಹಿತಿ ನೀಡಲಾಯಿತು. ಕೂಡಲೇ ಅಪಾಯದ ಸೈರನ್ ಮೊಳಗಿಸಿ, ಸ್ಪೀಕರ್ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಿ, ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಯಿತು.

ಉಡುಪಿಯಿಂದ ಅಗ್ನಿಶಾಮಕ ದಳ, ಆರೋಗ್ಯ ಸಿಬಂದಿ ಹಾಗೂ 3 ಆ್ಯಂಬುಲೆನ್ಸ್‌ಗಳು ಆಗಮಿಸಿದ್ದು, ಅನಿಲ ಸೋರುವಿಕೆ ನಿಯಂತ್ರಣಕ್ಕೆ ತರಲಾಯಿತು. ಅಸ್ವಸ್ಥರಾದವರನ್ನು ಆ್ಯಂಬುಲೆನ್ಸ್ ಮೂಲಕ ಸಮೀಪದ ಆರೋಗ್ಯ ಕೇಂದ್ರಕ್ಕೆ ಕರೆತಂದು ಪ್ರಥಮ ಚಿಕಿತ್ಸೆ ಅಗತ್ಯ ತುರ್ತು ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದವರನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಯಿತು. ಸ್ಥಳಕ್ಕೆ ಆಗಮಿಸಿದ ಪೊಲೀಸ್ ಸಿಬಂದಿ ಭದ್ರತೆ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಕಾರ್ಯಾಚರಣೆ ಪೂರ್ಣಗೊಂಡ ಕೂಡಲೇ ಅಂತಿಮ ಸೈರನ್ ಮೊಳಗಿಸಿ ಸುರಕ್ಷತೆ ಖಾತರಿಪಡಿಸಲಾಯಿತು.

Edited By :
Kshetra Samachara

Kshetra Samachara

30/07/2022 03:54 pm

Cinque Terre

11.66 K

Cinque Terre

1

ಸಂಬಂಧಿತ ಸುದ್ದಿ