ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಟ: ಭಾರಿ ಮಳೆಗೆ ಕೋಟ- ಗಿಳಿಯಾರಿನಲ್ಲಿ ಮನೆ ಧರಾಶಾಯಿ

ಕೋಟ: ಕಳೆದ ಕೆಳ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೋಟ ಗ್ರಾ.ಪಂ. ವ್ಯಾಪ್ತಿಯ ಗಿಳಿಯಾರು ಹೇರ್ಳೆಬೆಟ್ಟು ನಿವಾಸಿ ರಾಧಾ ರಾಮ ಮರಕಾಲ ಎಂಬವರ ಮನೆ ಸೋಮವಾರ ರಾತ್ರಿ ಸಂಪೂರ್ಣವಾಗಿ ಧರಾಶಾಯಿಯಾಗಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

ಈ ಮನೆ ಸಂಪೂರ್ಣ ಶಿಥಿಲಗೊಂಡು ಬೀಳುವ ಸ್ಥಿತಿಯಲ್ಲಿತ್ತು.ಇದನ್ನು ಗಮನಿಸಿದ ಸ್ಥಳೀಯ ಗ್ರಾ.ಪಂ. ಅಧ್ಯಕ್ಷ ಅಜಿತ್ ದೇವಾಡಿಗ, ಸದಸ್ಯ ಶೇಖರ್, ಯೋಗೀಶ್, ಪಿಡಿಒ ಸುರೇಶ್ ಕೆಮ್ಮಣ್ಣು, ಕಂದಾಯ ಅಧಿಕಾರಿ ರಾಜು ಹಾಗೂ ಗ್ರಾಮಲೆಕ್ಕಾಧಿಕಾರಿ ಚೆಲುವರಾಜು ಅವರು ಕೆಲವು ದಿನಗಳ ಹಿಂದೆ ಮನೆಯಲ್ಲಿದ್ದವರನ್ನು ಅಂಬೇಡ್ಕರ್ ಭವನಕ್ಕೆ ಸ್ಥಳಾಂತರಿಸಿದ್ದರು. ಹೀಗಾಗಿ ಮನೆ ಬೀಳುವ ಸಂದರ್ಭ ಯಾರೂ ಇರದ ಕಾರಣ ಅಪಾಯ ಸಂಭವಿಸಿಲ್ಲ. ವಿಷಯ ತಿಳಿದು ಸ್ಥಳಕ್ಕೆ ಸ್ಥಳೀಯ ಗ್ರಾ.ಪಂ. ಮುಖ್ಯಸ್ಥರು ಹಾಗೂ ಕಂದಾಯ ಇಲಾಖೆಯವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Edited By : Vijay Kumar
Kshetra Samachara

Kshetra Samachara

14/09/2022 09:31 am

Cinque Terre

3.53 K

Cinque Terre

0

ಸಂಬಂಧಿತ ಸುದ್ದಿ