ಉಡುಪಿ: ಜಿಲ್ಲೆಯಲ್ಲಿ ಮಳೆ ವಾತಾವರಣ ಮುಂದುವರಿದಿದ್ದು, ಸೆ.10ರಿಂದ ಮುಂದಿನ 5 ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಗುರುವಾರ ತಡರಾತ್ರಿ, ಶುಕ್ರವಾರ ಬಿಟ್ಟುಬಿಟ್ಟು ಧಾರಕಾರ ಮಳೆ ಸುರಿದಿದೆ. ಕುಂದಾಪುರ, ಕಾರ್ಕಳ, ಕಾಪು, ಉಡುಪಿ, ಬೈಂದೂರು ಸುತ್ತಮುತ್ತ ಕೆಲವೆಡೆ ರಾತ್ರಿ ವೇಳೆ ಹೆಚ್ಚು ಮಳೆ ಸುರಿದಿದೆ. ಉಡುಪಿ, ಮಣಿಪಾಲ, ಮಲ್ಪೆ ಪರ್ಕಳ ಸುತ್ತಮುತ್ತ ಮಧ್ಯಾಹ್ನ ಬಳಿಕ ಧಾರಾಕಾರ ಮಳೆ ಸುರಿದಿದ್ದು, ಕೆಲವು ರಸ್ತೆಗಳಲ್ಲಿ ಮಳೆ ನೀರು ನಿಂತು ವಾಹನ ಸವಾರರು ತೊಂದರೆ ಅನುಭವಿಸುವಂತಾಯಿತು.
ಜಿಲ್ಲೆಯಲ್ಲಿ ಇಂದು ಬೆಳಿಗ್ಗಿನಿಂದ ಜಡಿಮಳೆಯಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಮುಂದಿನ ಮೂರು ದಿನಗಳ ಕಾಲ ಕರಾವಳಿ ಭಾಗದಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ವೇಳೆ ಬಿರುಸಿನ ಮಳೆಯಾಗುವ ಸಾಧ್ಯತೆ ಇದೆ.
Kshetra Samachara
10/09/2022 08:49 am