ಪುತ್ತೂರು: ದಿನವಿಡೀ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಕರಾವಳಿಯ ಯುವಕರು ಕೃಷಿಯ ನಡುವೆಯೇ ಕೆಲವೊಂದು ಹವ್ಯಾಸಗಳಲ್ಲೂ ಮೈಗೂಡಿಸಿಕೊಂಡಿದ್ದಾರೆ. ಇಂಥ ಹವ್ಯಾಸಗಳಲ್ಲಿ ಏಡಿ ಹಿಡಿಯೋದು ಕೂಡಾ ಒಂದು.
ಕೋಳಿ ಅಂಗಡಿಯಿಂದ ತಂದ ಕೋಳಿಯ ಕರುಳನ್ನು ಕೋಲಿಗೆ ಸುತ್ತಿ ಕಲ್ಲುಗಳ ಅಂಚಿನಲ್ಲಿ ಇಡಲಾಗುತ್ತದೆ. ಈ ವಾಸನೆಯನ್ನು ಗ್ರಹಿಸಿ ಕಲ್ಲಿನ ಒಳಗಿರುವ ಏಡಿಗಳು ಹೊರ ಬರುತ್ತದೆ. ಹೊರ ಬಂದು ಏಡಿಗಳು ಕೋಳಿಯ ಕರುಳಿನ ತುಂಡನ್ನು ತಿನ್ನಲು ಹಿಡಿದುಕೊಳ್ಳುತ್ತದೆ.
ಹೀಗೆ ಹಿಡಿದುಕೊಳ್ಳುವ ಏಡಿಯ ಮೇಲೆ ಕತ್ತಿಯಿಂದ ಕುಕ್ಕಿ ಹಿಡಿಯಲಾಗುತ್ತದೆ. ದಿನವೊಂದರಲ್ಲಿ ನಾಲ್ಕರಿಂದ ಐದು ಏಡಿಗಳನ್ನು ಹಿಡಿಯುವ ಈ ಯುವಕರು ಒಂದು ದಿನದ ಊಟಕ್ಕೆ ಬೇಕಾದಷ್ಟು ಏಡಿಯನ್ನು ಸಂಗ್ರಹಿಸುತ್ತಾರೆ.
ಸಿಹಿನೀರು ಮತ್ತು ಉಪ್ಪುನೀರಿನ ಏಡಿಗಳಿದ್ದು, ಸಿಹಿನೀರಿನಲ್ಲಿ ಸಿಗುವ ಈ ಏಡಿಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯೂ ಇದೆ. ಕಲ್ಲುಏಡಿ ಎಂದು ಕರೆಯಲ್ಪಡುವ ಈ ಏಡಿಯ ದಷ್ಟಪುಷ್ಟ ಕಾಲಿಗೆ ಭಾರಿ ಡಿಮ್ಯಾಂಡ್. ಔಷಧೀಯ ಗುಣಗಳ ಆಗರವಾಗಿರುವ
ಈ ಏಡಿಗಳ ಮಾಂಸವನ್ನು ತಿಂದಲ್ಲಿ, ಸ್ನಾಯುಗಳಲ್ಲಿ ಕಂಡು ಬರುವ ಸೆಳೆತ ಹಾಗೂ ಇತರ ಸಮಸ್ಯೆಗಳು ಉಪಶಮನವಾಗುತ್ತದೆ ಎನ್ನುವ ನಂಬಿಕೆಯೂ ಈ ಭಾಗದಲ್ಲಿದೆ.
Kshetra Samachara
07/09/2022 06:14 pm