ಕುಂದಾಪುರ: ಕೋಟದ ಮೂಡುಗಿಳಿಯಾರು ಸಮೀಪದ ಸಣ್ಣ ಬಸವನಕಲ್ಲು ಪ್ರದೇಶದಲ್ಲಿ ಶುಕ್ರವಾರ ಸಂಜೆ ಚಿರತೆ ಪ್ರತ್ಯಕ್ಷವಾಗಿದೆ. ಮಕ್ಕಳು ಶಾಲೆಯಿಂದ ಮನೆಗೆ ತೆರಳುವ ವೇಳೆ ಚಿರತೆ ಕಾಣಿಸಿಕೊಂಡಿದೆ. ರಸ್ತೆ ಪಕ್ಕದ ಪೊದೆಯ ಬಳಿ ಈ ಚಿರತೆ ಕಾಣಿಸಿಕೊಂಡಿದ್ದು ಆತಂಕ ಹೆಚ್ಚಿದೆ. ಇದೀಗ ಚಿರತೆ ಪತ್ತೆಯಾದ ಕುರಿತು ಅರಣ್ಯ ಇಲಾಖೆಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.
Kshetra Samachara
26/08/2022 10:34 pm