ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಮನೆ ಮೇಲೆ ಬಿದ್ದ ಮರ; ಮನೆಯಲ್ಲಿದ್ದವರು ಪಾರು

ಕುಂದಾಪುರ: ಕೊಲ್ಲೂರು ಸಮೀಪದ ಜಡ್ಕಲ್‌ನಲ್ಲಿ ಕಳೆದೆರಡು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಜಡ್ಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಲ್ಕಲ್ ಎಂಬಲ್ಲಿ ಕೃಷ್ಣನಾಯ್ಕ ಎಂಬುವವರ ಮನೆ ಮೇಲೆ ಬೃಹತ್ ಮರವೊಂದು ಬಿದ್ದು ಮನೆ ಸಂಪೂರ್ಣ ನಾಶವಾಗಿದೆ. ಈ ದುರ್ಘಟನೆಯಲ್ಲಿ ದಿನಗೂಲಿ ಕಾರ್ಮಿಕರಾದ ಕೃಷ್ಣನಾಯ್ಕ ಮತ್ತು ಅವರ ಪತ್ನಿ ಗಾಯಗೊಂಡಿದ್ದಾರೆ. ಅವರ ಮಗು ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದೆ.

ಮನೆ ನಾಶದಿಂದ ಬಡ ಕುಟುಂಬಕ್ಕೆ ಜೀವನ ಸಾಗಿಸುವುದು ಕಷ್ಟಚಾಗಿದೆ. ಕೃಷ್ಣ ನಾಯ್ಕ ಅವರ ಪತ್ನಿ ಈಗಾಗಲೇ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಅರಣ್ಯ ಇಲಾಖೆ ಕಚೇರಿಯ ಪಕ್ಕದಲ್ಲೇ ಇವರ ಮನೆ ಇದೆ. ಸರಕಾರ ಕೂಡಲೇ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಘಟನಾ ಸ್ಥಳಕ್ಕೆ ಜಡ್ಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ಶೆಟ್ಟಿ, ಕಾರ್ಯದರ್ಶಿ ಶಂಕರ್ ಆಚಾರ್, ಗ್ರಾಮ ಲೆಕ್ಕಿಗ ವೀರೇಶ್ ಭೇಟಿ ನೀಡಿ ನಷ್ಟ ಹಾಗೂ ಹಾನಿಯ ಕುರಿತು ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದ್ದಾರೆ.

Edited By : Vijay Kumar
Kshetra Samachara

Kshetra Samachara

25/08/2022 02:06 pm

Cinque Terre

3.31 K

Cinque Terre

1

ಸಂಬಂಧಿತ ಸುದ್ದಿ