ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಮಣೂರು ಪಡುಕರೆಯಲ್ಲಿ ಮತ್ತೆ ಕಡಲ್ಕೊರೆತ: ಸ್ಥಳೀಯರಲ್ಲಿ ಹೆಚ್ಚಿದ ಆತಂಕ

ಕೋಟ: ಮಣೂರು ಪಡುಕರೆ ಮತ್ತು ಕೋಡಿಕನ್ಯಾಣದಲ್ಲಿ ಕಡಲ್ಕೊರೆತ ಹೆಚ್ಚಿದ್ದು ವ್ಯಾಪಕ ಹಾನಿಯಾಗುವ ಭೀತಿ ಎದುರಾಗಿದೆ. ಮಣೂರು ಪಡುಕರೆಯ ಬಿ.ಎ.ಕಾಂಚನ್ ರಸ್ತೆಯಲ್ಲಿ ಕಳೆದೆರಡು ದಿನಗಳಿಂದ ಕಡಲ್ಕೊರೆತ ತೀವ್ರಗೊಂಡಿದ್ದು ಸಂಪರ್ಕ ರಸ್ತೆ ಕಡಿತವಾಗುವ ಭೀತಿ ಇದೆ. ಇಲ್ಲಿನ ಲಿಲ್ಲಿ ಫೆರ್ನಾಂಡಿಸ್ ರಸ್ತೆಯೂ ಕೊರೆತ ಭೀತಿ ಎದುರಿಸುತ್ತಿದ್ದು, ತೀರ ಪ್ರದೇಶದ ಮನೆಗಳು ಕೂಡ ಅಪಾಯದಲ್ಲಿವೆ.

ಕೋಡಿ ಗ್ರಾ.ಪಂ. ವ್ಯಾಪ್ತಿಯ ಹೊಸಬೆಂಗ್ರೆಯಲ್ಲಿಯೂ ಸಂಪರ್ಕ ರಸ್ತೆ ಹಾಗೂ ಮನೆಗಳಿಗೆ ಹಾನಿಯಾಗುವ ಅಪಾಯವಿದೆ. ಮೀನುಗಾರಿಕೆ ಹಾಗೂ ಬಂದರು ಇಲಾಖೆಯ ಅಧಿಕಾರಿ ಡಯಾಸ್ ಅವರು ಮಂಗಳವಾರ ಪಡುಕರೆಗೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿದರು. ಗ್ರಾ.ಪಂ. ಸದಸ್ಯ ಭುಜಂಗ ಗುರಿಕಾರ ಉಪಸ್ಥಿತರಿದ್ದು ಸಮಸ್ಯೆ ಬಗ್ಗೆ ವಿವರಿಸಿದರು.

Edited By : Manjunath H D
Kshetra Samachara

Kshetra Samachara

10/08/2022 05:36 pm

Cinque Terre

5.41 K

Cinque Terre

0

ಸಂಬಂಧಿತ ಸುದ್ದಿ