ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿಡ್ಡೋಡಿ: ಮನೆಯಲ್ಲಿ ಪತ್ತೆಯಾದ ಎರಡು ತಲೆ (ಇರ್ತಳೆ)ಹಾವು!!

ಮುಲ್ಕಿ: ಕಿನ್ನಿಗೋಳಿ ಸಮೀಪದ ನಿಡ್ಡೋಡಿ ಮನೆಯೊಂದರಲ್ಲಿ ಎರಡು ತಲೆಯ ಹಾವು ಪತ್ತೆಯಾಗಿ ಕೆಲ ಕಾಲ ಮನೆ ಮಂದಿಯನ್ನು ಆತಂಕಕ್ಕೀಡು ಮಾಡಿದೆ.

ನಿಡ್ಡೋಡಿಯ ರಾಜೇಶ್ ಎಂಬವರ ಮನೆಯಲ್ಲಿ ಎರಡು ತಲೆಯ ಹಾವು ಪತ್ತೆಯಾಗಿದ್ದು, ಕೂಡಲೇ ಉರಗ ಪ್ರೇಮಿ ವಿನೇಶ್ ಪೂಜಾರಿ ನಿಡ್ಡೋಡಿಯವರಿಗೆ ವಿಷಯ ತಿಳಿಸಲಾಯಿತು. ಬಳಿಕ ಸ್ಥಳಕ್ಕೆ ಆಗಮಿಸಿದ ವಿನೇಶ್ ಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ಎರಡು ತಲೆಯ ಹಾವು ಇತ್ತೀಚಿನ ದಿನಗಳಲ್ಲಿ ಅತೀ ವಿರಳವಾಗಿದ್ದು, ಈ ಹಾವು ಹೆಚ್ಚು ಬೆಲೆ ಬಾಳುತ್ತದೆ ಎನ್ನುವ ವದಂತಿಯೊಂದು ಹಬ್ಬಿದ ಕಾರಣದಿಂದಲೇ ಹಾವನ್ನು ಹಿಡಿದು ಮಾರಾಟ ಮಾಡಲಾಗುತ್ತಿದೆ. ಇದೇ ಕಾರಣಕ್ಕೆ ಇದರ ಸಂತತಿ ಕಡಿಮೆಯಾಗಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.

ಕಳೆದ ಕೆಲ ವರ್ಷಗಳ ಹಿಂದೆ ಈ ಹಾವಿಗೆ ಬೆಲೆ ಕೊಡುತ್ತಾರೆ ಹಾಗೂ ಕೊಂಡುಕೊಳ್ಳುತ್ತಾರೆ ಎನ್ನುವ ವಿಚಾರವೊಂದು ಹರಿದಾಡಿದ ಹಿನ್ನೆಲೆಯಲ್ಲಿ ಹಾವುಗಳ ಬೇಟೆ ನಡೆದಿದ್ದು, ಕದ್ದು ಮಾರಾಟ ದಂಧೆ ನಡೆಸುತ್ತಿದ್ದ ಹಲವರು ಅರಣ್ಯಾಧಿಕಾರಿಗಳಿಂದ ಬಂಧನಕ್ಕೂ ಒಳಗಾಗಿದ್ದರು. ರೈತನ ಮಿತ್ರ, ಮಣ್ಣುಮುಕ್ಕ ಹಾವು ಎಂದೆಲ್ಲ ಕರೆಯಲ್ಪಡುವ ಇವುಗಳ ಸಂತತಿ ನಾಶವಾಗುತ್ತಿರುವುದು ಬೇಸರದ ಸಂಗತಿ ಎನ್ನುತ್ತಾರೆ ಉರಗ ಪ್ರೇಮಿ ವಿನೇಶ್ ಪೂಜಾರಿ.

Edited By : Shivu K
Kshetra Samachara

Kshetra Samachara

08/08/2022 12:20 pm

Cinque Terre

6.16 K

Cinque Terre

0

ಸಂಬಂಧಿತ ಸುದ್ದಿ