ಪುತ್ತೂರು: ಭಾರೀ ಮಳೆಯಿಂದಾಗಿ ಭೂಕುಸಿತ ಉಂಟಾಗಿ ಮೂರು ಮನೆಗಳು ಅಪಾಯದ ಸ್ಥಿತಿಗೆ ತಲುಪಿದ ಘಟನೆ ಪುತ್ತೂರು ನಗರಸಭಾ ವ್ಯಾಪ್ತಿಯ ಹೆಬ್ಬಾರಬೈಲು ಎಂಬಲ್ಲಿ ನಡೆದಿದೆ.
ಹೆಬ್ಬಾರಬೈಲು ರೈಲ್ವೇ ಹಳಿ ಬಳಿಯ ಮಹಮ್ಮದ್ ಶರೀಫ್, ಜಾರ್ಜ್ ಮತ್ತು ಯೋಗೀಶ್ ಎಂಬವರಿಗೆ ಸೇರಿದ ಮನೆಯ ಕೆಳಭಾಗದಲ್ಲಿ ಭೂಕುಸಿತ ಉಂಟಾದ ಪರಿಣಾಮ ಮಹಮ್ಮದ್ ಶರೀಫ್ ಅವರ ಮನೆಯ ಒಂದು ಪಿಲ್ಲರ್ ಹಾಗೂ ನೀರಿನ ಟ್ಯಾಂಕ್ ಕೆಳಗೆ ಉರುಳಿದೆ. ಮಳೆ ಹೀಗೆ ಮುಂದುವರಿದಲ್ಲಿ ಮೂರು ಮನೆಗಳು ಧರೆಗುರುಳುವ ಲಕ್ಷಣ ಕಂಡು ಬಂದಿದ್ದು, ಮನೆ ಮಂದಿ ಆತಂಕದಲ್ಲಿದ್ದಾರೆ.
Kshetra Samachara
12/07/2022 12:51 pm