ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮಳೆಗೆ ಮುಳುಗಿದೆ ಅದ್ಯಪಾಡಿ ಜನರ ಬದುಕು: ಜಲಾವೃತಗೊಂಡ ಮನೆಯಲ್ಲಿ ಜನಜೀವನ ಅಸ್ತವ್ಯಸ್ತ

ಮಂಗಳೂರು: ಈ ಬಾರಿಯ ಮಹಾ ಮಳೆನಕ್ಷತ್ರಗಳಾದ ಆರಿದ್ರಾ, ಪುನರ್ವಸು ಮಳೆ ಜನರ ಬದುಕನ್ನು ತೊಯ್ದು ತೊಪ್ಪೆ ಮಾಡಿದೆ. ಎಲ್ಲೆಡೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿ ಬದುಕು ಹೈರಾಣಾಗಿದೆ. ಇಂತಹದ್ದೇ ಸಂಕಷ್ಟದ ಸ್ಥಿತಿಯಲ್ಲಿ ಕಳೆದ 15 ದಿನಗಳಿಂದ ಮಂಗಳೂರು ತಾಲೂಕಿನ ಕಂದಾವರ ಗ್ರಾಮ ಪಂಚಾಯತ್ ಹಾಗೂ ಮೂಡಿಕೆರೆ ಪ್ರದೇಶದ ಜನತೆ ದಿನ ದೂಡುತ್ತಿದೆ‌.

ಏರಿದ ಪ್ರವಾಹ ಇಳಿಮುಖ ಕಂಡಿಲ್ಲ. ಇಲ್ಲಿನ 35 ಕುಟುಂಬಗಳ ಮನೆಗಳು, ತೋಟಗಳು ಸಂಪೂರ್ಣ ಜಲಾವೃತಗೊಂಡಿದೆ. ಈಗಾಗಲೇ ಹಲವು ಕುಟುಂಬಗಳು ಸೂರು ಕಳೆದುಕೊಂಡಿದೆ. ನೀರಿನ ಮಟ್ಟದಲ್ಲಿ ಇಳಿಕೆ ಕಾಣದ ಕಾರಣ ಇನ್ನೂ ಹಲವಾರು ಮನೆಗಳು ಕುಸಿಯುವ ಭೀತಿಯಲ್ಲಿದೆ. ಅಲ್ಲದೆ ಎಕರೆಗಟ್ಟಲೆ ಕೃಷಿಭೂಮಿ ಹಾನಿಗೊಳಗಾಗಿವೆ. ಇದಕ್ಕೆಲ್ಲಾ ಮರವೂರಿನ ಅವೈಜ್ಞಾನಿಕ ಕಿಂಡಿ ಅಣೆಕಟ್ಟೆ ಕಾರಣ ಎಂದು ಸಂತ್ರಸ್ತ ಜನತೆ ಅವಲತ್ತು ಕೊಳ್ಳುತ್ತಿದ್ದಾರೆ.

ಅದ್ಯಪಾಡಿ ಹಾಗೂ ಮೂಡುಕೆರೆ ಗ್ರಾಮದ ಜನತೆಗೆ ನೆರೆ ಹೊಸತೇನಲ್ಲ. ಆದರೆ ಮರವೂರಿನಲ್ಲಿ ಕಿಂಡಿ ಅಣೆಕಟ್ಟು ಕಟ್ಟಿದ ಬಳಿಕ ಏರಿದ ನೆರೆ 10-15 ದಿನಗಳಾದರೂ ಇಳಿಮುಖವಾಗುವುದಿಲ್ಲ. ಪರಿಣಾಮ ತುರ್ತು ವೇಳೆ ಅಗತ್ಯ ವಸ್ತುಗಳನ್ನು ತರಲೂ ತೊಂದರೆಯಾಗುತ್ತದೆ. ದೋಣಿಯನ್ನೇ ಅವಲಂಬಿಸುವ ಪರಿಸ್ಥಿತಿ ಉಂಟಾಗುತ್ತದೆ. ಇಲ್ಲಿನ ಜನತೆ ಕೃಷಿಯನ್ನೇ ನಂಬಿ ಬದುಕುತ್ತಿದ್ದು, ಈ ರೀತಿಯಲ್ಲಿ ನೀರು ನಿಂತು ಸಂಪೂರ್ಣ ಬೆಳೆ ಹಾನಿಗೊಳಗಾಗುತ್ತಿದೆ. ಆದ್ದರಿಂದ ಈ ಸಮಸ್ಯೆಯಿಂದ ಬಿಡುಗಡೆಯಾಗಲು ಮಳೆಗಾಲದ ಸಂದರ್ಭ ಕಿಂಡಿ ಅಣೆಕಟ್ಟಿನಲ್ಲಿ ನಿಯಮಿತವಾಗಿ ನೀರು ಹರಿದು ಹೋಗಲು 20 ಅಡಿ ಅಗಲಕ್ಕೆ ಕಾಲುವೆ ನಿರ್ಮಾಣವಾಗಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ‌‌. ಈ ಬಗ್ಗೆ ಸರಕಾರ, ಸ್ಥಳೀಯ ಜನಪ್ರತಿನಿಧಿಗಳು ಗಮನಹರಿಸಬೇಕಾಗಿದೆ.

Edited By : Manjunath H D
Kshetra Samachara

Kshetra Samachara

09/07/2022 09:35 pm

Cinque Terre

9.75 K

Cinque Terre

0

ಸಂಬಂಧಿತ ಸುದ್ದಿ