ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಇರುವೈಲಿನಲ್ಲಿ ಅಡಿಕೆ ತೋಟ ನಾಶ; ಮನೆ ಅಪಾಯದಂಚಿನಲ್ಲಿ!

ವರದಿ: ರಂಜಿತಾ ಮೂಡುಬಿದಿರೆ

ಮೂಡುಬಿದಿರೆ: 5 ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಗೆ  ಮೂಡುಬಿದಿರೆ ತಾಲೂಕಿನ ಇರುವೈಲು ಗ್ರಾಪಂ ವ್ಯಾಪ್ತಿಯ ಪಂಜದಲ್ಲಿ ಪ್ರಶಾಂತ್ ಮತ್ತು ರಾಜೇಶ್ ಎಂಬವರ  ಅಡಿಕೆ ತೋಟ ಕುಸಿತವಾಗಿ, ತೋಟದ ಮೇಲ್ಭಾಗದಲ್ಲಿ ಇದ್ದ ಮನೆ ಅಪಾಯದ ಅಂಚಿನಲ್ಲಿದೆ.

ನೂರಕ್ಕೂ ಅಧಿಕ  ಅಡಿಕೆ ಮರಗಳು ನಾಶವಾಗಿದ್ದು,  25 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಪ್ರಶಾಂತ್ ಮತ್ತು ರಾಜೇಶ್  ಸಹೋದರರ  ಮನೆ ಕೆಳಭಾಗದಲ್ಲಿರುವ ತೋಟದ ಮಣ್ಣು ಸಡಿಲಗೊಂಡು ಇಡೀ ತೋಟ ಕೆಳಭಾಗಕ್ಕೆ ಜಾರಿದ ಪರಿಣಾಮ ತೋಟದ ಮೇಲ್ಭಾಗದಲ್ಲಿರುವ ಮನೆ ಕೂಡ ಕೆಳಕ್ಕೆ ಬೀಳುವ ಭೀತಿ ಎದುರಾಗಿದೆ. 

ಮನೆ ಅಡಿ ಭಾಗದ ಮಣ್ಣು ನಿಧಾನಕ್ಕೆ ಕೆಳಕ್ಕೆ ಜಾರುತ್ತಿದ್ದು, ಮಳೆ ಇದೇ ರೀತಿ ಮುಂದುವರಿದರೆ ಮಣ್ಣು ಇನ್ನಷ್ಟು ಕುಸಿದು ಸಂಪೂರ್ಣ ಮನೆಯೇ ನಾಶವಾಗಬಹುದು. ಪ್ರಶಾಂತ್ ಮತ್ತವರ ಕುಟುಂಬ ಇದೇ ಮನೆಯಲ್ಲಿದ್ದು, ಮಣ್ಣು ಕುಸಿತ ಬಗ್ಗೆ ಅರಿವಿಗೆ ಬರುತ್ತಿದ್ದಂತೆಯೇ ಮನೆ ಖಾಲಿ ಮಾಡಿದ್ದರಿಂದ ಯಾವುದೇ ಅನಾಹುತ ಆಗಿಲ್ಲ.

ಮೂಡುಬಿದಿರೆ ತಾಲೂಕು ತಹಸೀಲ್ದಾರ್ ಪುಟ್ಟರಾಜು, ಕಂದಾಯ ನಿರೀಕ್ಷಕ ಮಂಜುನಾಥ್,  ಗ್ರಾಮ ಲೆಕ್ಕಾಧಿಕಾರಿ ಗಾಯತ್ರಿ  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ನಷ್ಟದ ಅಂದಾಜು ನಡೆಸಿ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ. ಇರುವೈಲು ಗ್ರಾಪಂ ಅಧ್ಯಕ್ಷ ವಲೇರಿಯನ್ ಕುಟಿನಾ, ಪಂ. ಸದಸ್ಯ ನಾಗೇಶ್ ಅಮೀನ್ , ಎಪಿಎಂಸಿ ಸದಸ್ಯ ಚಂದ್ರಹಾಸ ಸನಿಲ್, ಪಿಡಿಒ ಕಾಂತಪ್ಪ, ಮುಖಂಡ ಹರೀಶ್ ಕರ್ಕೇರ ಸೇರಿದಂತೆ ಸ್ಥಳೀಯ ಪ್ರಮುಖರು ಸ್ಥಳಕ್ಕೆ ಭೇಟಿ ನೀಡಿದರು. 

Edited By : Nagesh Gaonkar
Kshetra Samachara

Kshetra Samachara

07/07/2022 06:06 pm

Cinque Terre

25.61 K

Cinque Terre

0

ಸಂಬಂಧಿತ ಸುದ್ದಿ