ಬಂಟ್ವಾಳ: ಬಂಟ್ವಾಳದಿಂದ ಹಾದುಹೋಗುವ ನೇತ್ರಾವತಿ ನದಿ ಸೋಮವಾರ ಮಧ್ಯಾಹ್ನದ ಹೊತ್ತಿಗೆ 5.5 ಮೀಟರ್ ಎತ್ತದರಲ್ಲಿ ಹರಿಯುತ್ತಿದ್ದರೆ, ಸಂಜೆ ವೇಳೇ 6.5 ಮೀಟರ್ ಎತ್ತರದಲ್ಲಿ ಹರಿಯುತ್ತಿದೆ.
ಅಪಾಯದ ಮಟ್ಟ 8.5 ಮೀಟರ್ ಆಗಿದೆ. ಇದು ಈ ವರ್ಷದ ಗರಿಷ್ಠ ಪ್ರಮಾಣದ ಮಾಪನವಾಗಿದೆ. ಘಟ್ಟ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಹರಿವು ಹೆಚ್ಚಳವಾಗಿದೆ.
ಬೆಳಗ್ಗೆ 5.2 ಮೀಟರ್ ಎತ್ತರದಲ್ಲಿ ಹರಿಯುತ್ತಿದ್ದ ನದಿ, ಮಳೆ ಜಾಸ್ತಿಯಾಗತೊಡಗಿದಂತೆ 5.5 ಮೀಟರ್ ಗೇರಿತು. ಬಳಿಕ ಮತ್ತೂ ಒಂದು ಮೀಟರ್ ಎತ್ತರ ತಲುಪಿತು. ಅಪಾಯದ ಮಟ್ಟವಾದ 8.5 ಮೀಟರ್ ತಲುಪಲು ಇನ್ನೂ ಸಮಯವಿದೆ ಆದರೂ ಇದೇ ರೀತಿ ಘಟ್ಟ ಪ್ರದೇಶಗಳಲ್ಲಿ ಮಳೆಯಾಗುತ್ತಿದ್ದರೆ, ನೀರು ಜಾಸ್ತಿಯಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Kshetra Samachara
04/07/2022 09:12 pm