ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳ್ತಂಗಡಿ ತಾಲೂಕಿನ ಶಿರ್ಲಾಲಿನಲ್ಲಿ ಕೆಂಪು‌ ಮಳೆ!

ಬೆಳ್ತಂಗಡಿ: ಕೆಂಪು ಮಳೆ ಬಿದ್ದಿರುವ ಘಟನೆ ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಎಂಬಲ್ಲಿ ನಡೆದಿದೆ.

ಶಿರ್ಲಾಲು ನಿವಾಸಿ ಸೂರ್ಯನಾರಾಯಣ ಭಟ್ ಅವರ ಮನೆಯಲ್ಲಿ ಬಕೆಟ್, ಡ್ರಮ್ ಗಳಲ್ಲಿ ಕೆಂಪು ನೀರು ತುಂಬಿಕೊಂಡಿರುವುದು ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಈ ನೀರನ್ನು ಪರೀಕ್ಷೆ ನಡೆಸಲು ಕಳುಹಿಸಲಾಗಿದೆ.

ಪರಿಸರದಲ್ಲಿ ಒಂದೇ ಮನೆ ಇದ್ದು, ಒಂದು ಕಿ.ಮೀ.ದೂರದಲ್ಲಿ ಇರುವ ಶಿರ್ಲಾಲು ಪೇಟೆಯಲ್ಲಿ ಇಟ್ಟಿರುವ ಬಕೆಟ್‌ನಲ್ಲಿ ಕೆಂಪು ನೀರು ಇರಲಿಲ್ಲ ಎಂದು ಅವರು ತಿಳಿಸಿದ್ದಾರೆ. ಇದೀಗ ಅಳದಂಗಡಿ ಪರಿಸರದ ವಿವಿಧೆಡೆಗಳಲ್ಲಿಯೂ ಕೆಂಪು ಮಳೆ ಬಂದಿರುವುದಾಗಿ ತಿಳಿದು ಬಂದಿದೆ. ಇದಕ್ಕೆ ಕಾರಣವೇನು ಎಂಬುದು ಇನ್ನೂ ತಿಳಿದು ಬಂದಿಲ್ಲ.

Edited By : Nagaraj Tulugeri
PublicNext

PublicNext

01/07/2022 01:32 pm

Cinque Terre

18.68 K

Cinque Terre

0

ಸಂಬಂಧಿತ ಸುದ್ದಿ