ಬ್ರಹ್ಮಾವರ: ತಾಲೂಕಿನ ಬಾರಕೂರು , ಬಂಡೀಮಠ, ಕೂರಾಡಿ , ನಡೂರು ಮೂಲಕ ಕೊಕ್ಕರ್ಣೆಗೆ ಹೋಗುವಾಗ ನಡೂರು ಗುಡ್ಡೆಅಂಗಡಿಯಿಂದ ರಸ್ತೆಯ ಇಕ್ಕೆಳಗಳಲ್ಲೂ ಬಾನೆತ್ತರಕ್ಕೆ ಬೆಳೆದು ನಿಂತ ಅಕೇಶಿಯಾ ಮರಗಳು ಅಪಾಯವನ್ನು ಆಹ್ವಾನಿಸುತ್ತಿವೆ.
ಈ ಭಾಗದಲ್ಲಿ ಅರಣ್ಯ ಇಲಾಖೆ ಮೂಲಕ ನೆಡಲಾದ ಅಕೇಶಿಯಾ ಮರಗಳು ಮಳೆಗಾಲದಲ್ಲಿ ರಸ್ತೆಗೆ ಬಿದ್ದು ಸಂಚಾರಕ್ಕೆ ಕುತ್ತು ತರುತ್ತಿವೆ. ಮಾತ್ರವಲ್ಲ ,ಈ ಹಿಂದೆ ಎರಡು ಜೀವಗಳು ಬಲಿಯಾದ ಉದಾಹರಣೆಯೂ ಇದೆ.
ವರ್ಷಂಪ್ರತಿ ಮಳೆಗಾಲಕ್ಕೆ ಅಕೇಶಿಯಾ ಮರಗಳು ರಸ್ತೆಗೆ ಉರುಳಿ ಬೀಳುವುದರಿಂದ ಇವುಗಳನ್ನು ಕಡಿಯಲು ಸ್ಥಳೀಯರು ಆಗ್ರಹಿಸಿದ್ದಾರೆ. ಈ ವರ್ಷ ಬಂದ ಬೇಸಿಗೆ ಮಳೆಗೆ ಹಲವು ಮರಗಳು ಈಗಾಗಲೇ ಉರುಳಿ ರಸ್ತೆಗೆ ಬಿದ್ದಿವೆ.
ಈ ಸಂಬಂಧ ಅರಣ್ಯ ಇಲಾಖೆಯವರಿಗೆ ತಿಳಿಸಿದರೆ ಕೆಸಿಡಿಸಿ ಇಲಾಖೆಯನ್ನು ತೋರಿಸುತ್ತಾರೆ .ಅವರಿಗೆ ಹೇಳಿದರೆ ಅರಣ್ಯ ಇಲಾಖೆಯನ್ನು ತೋರಿಸುತ್ತಾರೆ! ಕೇಂದ್ರ ಸರಕಾರವೇ ನೀರಿನ ಅಂತರ್ಜಲವನ್ನು ಅಪಾರವಾಗಿ ಹೀರುವ ಆಕೇಶಿಯಾ ಮರಗಳನ್ನು ನಿರ್ಮೂಲನೆ ಮಾಡುವಂತೆ ಹೇಳಿದೆ. ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಂಡು ಮುಂದೆ ನಡೆಯಬಹುದಾದ ಅನಾಹುತ ತಪ್ಪಿವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
Kshetra Samachara
18/06/2022 08:31 pm