ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮರೋಳಿಯ ರಾಷ್ಟ್ರೀಯ ಹೆದ್ದಾರಿ ಬಳಿ ಜೋಡಿ ಕಾಡುಕೋಣಗಳು ಪತ್ತೆ

ಮಂಗಳೂರು: ನಗರದ ಮರೋಳಿಯ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಇಂದು ಬೆಳಗ್ಗೆ ಜೋಡಿ ಕಾಡುಕೋಣಗಳು ಪತ್ತೆಯಾಗಿವೆ‌.

ಮರೋಳಿಯ ಲಾಲ್ ಬಹದ್ದೂರ್ ಶಾಸ್ತ್ರಿ ಬಡಾವಣೆಯ ಕೆನರಾ ಸ್ಪ್ರಿಂಗ್ಸ್ ಬಳಿ ಈ ಕಾಡುಕೋಣಗಳು ಪತ್ತೆಯಾಗಿದೆ. ಇಂದು ಬೆಳಗ್ಗಿನಿಂದ ಈ ಕಾಡುಕೋಣಗಳು ಅಲ್ಲೇ ಸುತ್ತಾಡುತ್ತಿದ್ದು, ಸ್ಥಳೀಯ ಜನತೆಯಲ್ಲಿ ಭೀತಿ ಉಂಟಾಗಿದೆ. ಈ ಕಾಡುಕೋಣಗಳ ಸಂಚರಿಸುತ್ತಿರುವ ದೃಶ್ಯವನ್ನು ಯಾರೋ ವೀಡಿಯೋ ಚಿತ್ರೀಕರಿಸಿದ್ದು, ಸದ್ಯ ವೀಡಿಯೋ ವೈರಲ್ ಆಗುತ್ತಿವೆ‌.

ಏಳು ತಿಂಗಳ ಹಿಂದೆ ಇದೇ ಮರೋಳಿಯ ಜಯನಗರದಲ್ಲಿ ಚಿರತೆಯೊಂದು ಪತ್ತೆಯಾಗಿ ಜನರಲ್ಲಿ ಆತಂಕ ಸೃಷ್ಟಿಯಾಗಿತ್ತು. ಬಳಿಕ ಅರಣ್ಯ ಇಲಾಖೆ ಕ್ಯೂಬಿಂಗ್ ಮಾಡಿದ್ದರೂ ಚಿರತೆ ಮಾತ್ರ ಪತ್ತೆಯಾಗಿರಲಿಲ್ಲ. ಇದೀಗ ಕಾಡುಕೋಣಗಳು ಪತ್ತೆಯಾಗಿದ್ದು, ಜನರನ್ನು ಮತ್ತೆ ಆತಂಕಕ್ಕೆ ದೂಡುವಂತೆ ಮಾಡಿದೆ. ಕಾಡುಪ್ರಾಣಿಗಳು ಏಕಾಏಕಿ ಕಂಡು ಬರುವುದಕ್ಕೆ ಮರೋಳಿಯಲ್ಲಿ ಅರಣ್ಯ ನಾಶವೇ ಕಾರಣ ಎಂದು ಸ್ಥಳೀಯರು ಹೇಳುತ್ತಿದ್ದಾರೆ

Edited By : Shivu K
Kshetra Samachara

Kshetra Samachara

31/05/2022 02:09 pm

Cinque Terre

8.12 K

Cinque Terre

0

ಸಂಬಂಧಿತ ಸುದ್ದಿ