ಮಂಗಳೂರು: ನಿರಂತರ ಮಳೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಅದರಂತೆ
ಕಳೆದ ಎರಡು ದಿನಗಳಿಂದ ಕರಾವಳಿಯಲ್ಲಿ ಭಾರೀ ಮಳೆ ಸುರಿತಿದೆ. ಇಂದು ಬೆಳಗ್ಗೆ ಕೊಂಚ ವಿರಾಮ ಕೊಟ್ಟ ಮಳೆರಾಯ ಸಂಜೆ ವೇಳೆ ಮತ್ತೆ ಸುರಿದಿದೆ.
ಇನ್ನು ವೀಕೆಂಡ್ ಆಗಿದ್ದರಿಂದ ಮಂಗಳೂರು ನಗರದ ಪಣಂಬೂರು ಬೀಚ್ ಕಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು. ಮಳೆ, ಗಾಳಿ ಹಾಗೂ ಸಮುದ್ರದ ಅಲೆ ಆರ್ಭಟ ಜೋರಾಗಿದ್ದು ಯಾರು ಕೂಡಾ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಹೀಗಾಗಿ ಇಂದು ಪಣಂಬೂರು ಬೀಚ್ ಕಡೆಗೆ ಬಂದಿದ್ದ ಪ್ರವಾಸಿಗರು ನಿರಾಸೆಯಿಂದ ವಾಪಸ್ ಹೋಗುವಂತಾಯಿತು.
PublicNext
22/05/2022 07:44 am