ಬೆಳ್ತಂಗಡಿ: ಪ್ರಕೃತಿ ಒಂದು ವಿಸ್ಮಯಗಳ ಕಣಜ. ಇಲ್ಲಿ ವಿವಿಧ ರೀತಿಯ ವಿಸ್ಮಯಗಳು ನಡೆಯುತ್ತಿರುತ್ತದೆ. ಇದಕ್ಕೆ ಉದಾಹರಣೆಯಾಗಿ ಗೋಡಂಬಿ ಆಕಾರದ ರೀತಿಯ ಕೋಳಿ ಮೊಟ್ಟೆಗಳು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಲಾಯಿಲ ಸಮೀಪ ಕಂಡು ಬಂದಿದೆ.
ಲಾಯಿಲ ಗ್ರಾಮದ ಬೇಲಾಜೆ ಮನೆಯ ಪ್ರಶಾಂತ್ ಎಂಬುವವರ ಮನೆಯಲ್ಲಿ ಸಾಕಿದ್ದ ಕೋಳಿಯೊಂದು ಕಳೆದ ಕೆಲವು ದಿನಗಳಿಂದ ಮೊಟ್ಟೆ ಇಡುತ್ತಿದೆ. ಇದು ಗೋಡಂಬಿ ರೀತಿಯಲ್ಲಿದೆ. ಈ ಮೊಟ್ಟೆಯ ಆಕಾರ ನೋಡಿ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸುತ್ತಾರೆ.
PublicNext
21/05/2022 05:30 pm