ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಅಸಾನಿ ಚಂಡಮಾರುತ ಎಫೆಕ್ಟ್: ಜಿಲ್ಲೆಯಾದ್ಯಂತ ಜಿಟಿಜಿಟಿ ಮಳೆ

ಉಡುಪಿ : ಅಸಾನಿ ಚಂಡಮಾರುತದ ಪರಿಣಾಮವಾಗಿ ಜಿಲ್ಲಾದ್ಯಂತ ಇಂದು ಬೆಳಗ್ಗಿನಿಂದಲೇ ಜಿಟಿಜಿಟಿ ಮಳೆಯಾಗುತ್ತಿದೆ. ಉಡುಪಿ ,ಮಲ್ಪೆ ,ಕುಂದಾಪುರ, ಕಾರ್ಕಳ ಸಹಿತ ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣ ಇದ್ದು ಇಂದು ಮುಂಜಾನೆಯಿಂದಲೇ ಮಳೆಯಾಗುತ್ತಿದೆ.ಕಡಲು ಪ್ರಕ್ಷುಬ್ಧ ಗೊಂಡ ಹಿನ್ನೆಲೆಯಲ್ಲಿ 2 ದಿನಗಳಿಂದ ಸೈಂಟ್ ಮೇರಿಸ್ ಯಾನ ರದ್ದು ಮಾಡಲಾಗಿದೆ.ಮಲ್ಪೆ ಬೀಚಿನ ಎಲ್ಲಾ ಮೋಜು ಕ್ರೀಡೆಗಳನ್ನು ಸ್ಥಗಿತಗೊಳಿಸಲಾಗಿದೆ. ಜಿಲ್ಲೆಯಾದ್ಯಂತ ಮಳೆಯಾಗುತ್ತಲೇ ಇದ್ದು, ಜನರು ಕಚೇರಿಗಳಿಗೆ ತೆರಳಲು ಪರದಾಡುವಂತಾಯಿತು.

Edited By : PublicNext Desk
Kshetra Samachara

Kshetra Samachara

11/05/2022 11:58 am

Cinque Terre

4.56 K

Cinque Terre

0

ಸಂಬಂಧಿತ ಸುದ್ದಿ