ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಬಿಳಿ ಹುಲಿಯ ಆಗಮನ

ಮಂಗಳೂರು: ನಗರದ ವಾಮಂಜೂರಿನಲ್ಲಿರುವ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಹೊಸ ಆಕರ್ಷಣೆಯಾಗಿ ಬಿಳಿ ಹೆಣ್ಣು ಹುಲಿಯು ಆಗಮನವಾಗಿದೆ.

ಕೇಂದ್ರ ಮೃಗಾಲಯ ಪ್ರಾಧಿಕಾರದ ಪ್ರಾಣಿ ವಿನಿಮಯ ಯೋಜನೆಯಡಿಯಲ್ಲಿ ಚೆನ್ನೈನ ಅರಿಗ್ಣರ್ ಅಣ್ಣ ಮೃಗಾಲಯದಿಂದ ಒಂದು ಬಿಳಿ ಹೆಣ್ಣುಹುಲಿ ಕಾವೇರಿಯನ್ನು ತರಿಸಲಾಗಿದೆ. ಅಲ್ಲದೆ ಹೆಣ್ಣು ಉಷ್ಟ್ರ ಪಕ್ಷಿಯೊಂದನ್ನು ತರಿಸಲಾಗಿದೆ. ಜೊತೆಗೆ ಪಿಲಿಕುಳ ಜೈವಿಕ ಉದ್ಯಾನವನದಿಂದ ಅರಿಗ್ಣರ್ ಅಣ್ಣ ಮೃಗಾಲಯಕ್ಕೆ ಒಂದು ಬೆಂಗಾಲ್ ಹುಲಿ, ನಾಲ್ಕು ಕಾಡುನಾಯಿಗಳು ಹಾಗೂ ಹಲವು ಹಾವುಗಳನ್ನು ಕಳುಹಿಸಿ ಕೊಡಲಾಗುತ್ತದೆ. ಈ ಹೊಸ ಅತಿಥಿ ಬಿಳಿ ಹುಲಿಯನ್ನು ಕ್ವಾರೆಂಟೈನ್ ನಲ್ಲಿ ಪ್ರತ್ಯೇಕಿಸಿ ಇಡಲಾಗಿದೆ. ಸ್ಥಳೀಯ ಪರಿಸರಕ್ಕೆ ಈ ಹುಲಿ ಒಗ್ಗಿದ ಬಳಿಕ ವಾರದೊಳಗೆ ಸಾರ್ವಜನಿಕರ ವೀಕ್ಷಣೆಗೆ ಇಡಲಾಗುತ್ತದೆ.

ಮುಂದಿನ ದಿನಗಳಲ್ಲಿ ಗುಜರಾತ್‌ನ ರಾಜ್ ಕೋಟ್ ಮೃಗಾಲಯದಿಂದ ಏಷ್ಯಾಟಿಕ್ ಸಿಂಹ, ಭಾರತೀಯ ತೋಳಗಳು ಹಾಗೂ ಹಲವು ಅಪರೂಪದ ಪಕ್ಷಿಗಳನ್ನು ತರಿಸಲಾಗುತ್ತದೆ. ಮಹಾರಾಷ್ಟ್ರದ ಗೋರೆವಾ ಮೃಗಾಲಯದಿಂದ ಬಿಳಿ ಕೃಷ್ಣಮೃಗಗಳು ಹಾಗೂ ಕರಡಿಗಳನ್ನು ಒಡಿಶಾದ ನಂದನಕಾನನ ಮೃಗಾಲಯದಿಂದ ಅಪರೂಪದ ಹೋಗ್ ಜಿಂಕೆ, ನೀಲಗಾಯಿಗಳು ಹಾಗೂ ಪಕ್ಷಿಗಳನ್ನು ಪ್ರಾಣಿ ವಿನಿಮಯ ಯೋಜನೆಯಡಿಯಲ್ಲಿ ಪಿಲಿಕುಳಕ್ಕೆ ತೀರಿಸಿಕೊಳ್ಳಲು ಕ್ರಮಕೈಗೊಳ್ಳಲಾಗಿದೆ. ಶೀಘ್ರದಲ್ಲೇ ಕೇಂದ್ರ ಮೃಗಾಲಯ ಪ್ರಾಧಿಕಾರದಿಂದ ಒಪ್ಪಿಗೆ ಪಡೆದು ಕಾರ್ಯರೂಪಕ ಬರಲಾಗುತ್ತದೆ.

Edited By : Vijay Kumar
Kshetra Samachara

Kshetra Samachara

04/05/2022 09:48 pm

Cinque Terre

4.69 K

Cinque Terre

0

ಸಂಬಂಧಿತ ಸುದ್ದಿ