ವಿಟ್ಲ: ಕಾಡಿನಿಂದ ನೀರು ಕುಡಿಯಲು ಬಂದ ಕಾಡುಕೋಣವೊಂದು ನೀರಿನ ಟ್ಯಾಂಕ್‌ಗೆ ಬಿದ್ದ ಘಟನೆ ಬಂಟ್ವಾಳ ತಾಲೂಕಿನ ಕನ್ಯಾನದಲ್ಲಿ ನಡೆದಿದೆ.
ಕಳೆಂಜೆಮಲೆ ರಕ್ಷಿತಾರಣ್ಯ ಕಾಡಿನಿಂದ ಕಾಡುಕೋಣ ನೀರು ಹುಡುಕಿಕೊಂಡು ನಾಡಿಗೆ ಬಂದಿದೆ. ಈ ವೇಳೆ ಕನ್ಯಾನ ಭಾರತ ಸೇವಾಶ್ರಮದ ನೀರಿನ ಟ್ಯಾಂಕ್‌ನಲ್ಲಿ ನೀರು ಕುಡಿಯಲು ಯತ್ನಿಸಿದಾಗ ಕಾಲು ಜಾರಿ ಟ್ಯಾಂಕ್‌ಗೆ ಬಿದ್ದಿದೆ. ಇದರಿಂದ ಮೇಲೆ ಏಳಲಾಗದೆ ಟ್ಯಾಂಕ್‌ನಲ್ಲೇ ಉಳಿದಿದೆ. ಮಧ್ಯರಾತ್ರಿ ಈ ಘಟನೆ ಸಂಭವಿಸಿದ್ದು, ಬೆಳಿಗ್ಗೆ ಆಶ್ರಮ ನಿವಾಸಿಗಳು ನೋಡಿದಾಗ ಘಟನೆ ಬೆಳಕಿಗ್ಗೆ ಬಂದಿದೆ.
ಸ್ಥಳಕ್ಕೆ ವಿಟ್ಲ ಶಾಖೆಯ ಅರಣ್ಯಾಧಿಕಾರಿಗಳು ಭೇಟಿ ನೀಡಿ, ಕೋಣದ ರಕ್ಷಣೆಗೆ ಕಾರ್ಯಾಚರಣೆ ನಡೆಸಿದ್ದಾರೆ. ಟ್ಯಾಂಕ್‌ನಿಂದ ನೀರು ಖಾಲಿ ಮಾಡಲಾಗುತ್ತಿದ್ದು, ಅದರ ಮೂಲಕ ಕೋಣವನ್ನು ರಕ್ಷಿಸಲಾಗುತ್ತದೆ. ಟ್ಯಾಂಕ್ 5 ಅಡಿ ಆಳವಿದ್ದು, ಕೋಣಕ್ಕೆ ಯಾವುದೇ ಗಾಯಗಳಾಗಿಲ್ಲ ಎಂದು ಅರಣ್ಯ ಸಿಬ್ಬಂದಿ ತಿಳಿಸಿದ್ದಾರೆ.
Kshetra Samachara
02/05/2022 03:45 pm