ಉಡುಪಿ: ಸರಣಿ ರಜೆಗಳ ಹಿನ್ನೆಲೆಯಲ್ಲಿ ಉಡುಪಿಯ ಧಾರ್ಮಿಕ ಮತ್ತು ಪ್ರವಾಸಿ ತಾಣಗಳಲ್ಲಿ ಶುಕ್ರವಾರ, ಶನಿವಾರ ಭಾರೀ ಜನಸಂದಣಿ ಕಂಡುಬಂದಿದೆ.
ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ, ಗುಡ್ ಫ್ರೈಡೇ, ಮೂರನೇ ಶನಿವಾರ ಮತ್ತು ರವಿವಾರದ ಸಾಲು ರಜೆಯಿಂದಾಗಿ ಸೋಮವಾರದ ತನಕವೂ ಜಿಲ್ಲೆಯ ಪ್ರವಾಸಿ ತಾಣ ಮತ್ತು ಧಾರ್ಮಿಕ ಕೇಂದ್ರದಲ್ಲಿ ಜನಸಂದಣಿ ಇರುವ ನಿರೀಕ್ಷೆ ಇದೆ.ಸರಣಿ ರಜೆಯ ಹಿನ್ನೆಲೆಯಲ್ಲಿ ಮಲ್ಪೆ ಬೀಚ್‌ಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.
ಬೆಳಗ್ಗಿನಿಂದಲೇ ಪ್ರವಾಸಿಗರ ವಾಹನಗಳ ಸಾಲು ಬೀಚ್ ಕಡೆಗೆ ಬರುತ್ತಿದ್ದು ಬೀಚಿನ ಎಲ್ಲ ಪಾರ್ಕಿಂಗ್ ಸ್ಥಳಗಳು ಭರ್ತಿಯಾಗಿದೆ.
PublicNext
16/04/2022 09:41 pm