ಉಡುಪಿ: ನಿನ್ನೆ ಮಧ್ಯರಾತ್ರಿಯ ಬಳಿಕ ಜಿಲ್ಲೆಯ ಹಲವೆಡೆ ಗುಡುಗು ಸಿಡಿಲು ಸಹಿತ ಮಳೆಯಾಗಿದ್ದು ಹಲವು ಮನೆಗಳಿಗೆ ಹಾನಿಯಾಗಿದೆ.
ಹೆಬ್ರಿ ತಾಲೂಕಿನ ಶಿವಪುರ ಗ್ರಾಮದ ಸುಂದರ ಹೆಗ್ಡೆ ಎಂಬವರ ಮನೆ ಗಾಳಿ- ಮಳೆಯಿಂದ ತೀವ್ರ ಹಾನಿಗೊಂಡಿದ್ದು 3.5 ಲಕ್ಷ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿರುವ ಬಗ್ಗೆ ವರದಿಗಳು ಬಂದಿವೆ. ಇನ್ನು ಕುಂದಾಪುರ ತಾಲೂಕಿನ ಅಂಪಾರು ಗ್ರಾಮದ ಮಹಾಬಲ ಆಚಾರಿ ಎಂಬವರ ಮನೆಗೆ 25,000ರೂ. ನಷ್ಡವಾದರೆ , ಬೋಜು ನಾಯ್ಕ ಎಂಬವರ ಮನೆಯ ಗೋಡೆ ಬಿರುಕು ಬಿಟ್ಟು 45,000ರೂ. ಹಾನಿ ಉಂಟಾಗಿದೆ.
ಮುಂದಿನ 48 ಗಂಟೆಗಳಲ್ಲಿ ಕರಾವಳಿ ಜಿಲ್ಲೆಯ ಅಲ್ಲಲ್ಲಿ ಸಾಧಾರಣದಿಂದ ಭಾರೀ ಮಳೆ ಸುರಿಯುವುದಾಗಿ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಮಾ.24 ಮತ್ತು 25ರಂದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಅಲ್ಲಲ್ಲಿ ಗುಡುಗು-ಸಿಡಿಲಿನಿಂದ ಕೂಡಿದ ಭಾರೀ ಮಳೆ ಸುರಿಯುವ ಸಂಭವವಿದೆ. ಅಂದಾಜು 65ಮಿ.ಮೀ. ಮಳೆ ಬೀಳಬಹುದು ಎಂದು ಹವಾಮಾನ ವರದಿ ತಿಳಿಸಿದೆ.
Kshetra Samachara
24/03/2022 09:05 pm