ಸುಳ್ಯ: ನಗರದ ಕೃಷಿ ಪ್ರದೇಶದಲ್ಲಿ ಕೋತಿಗಳು ಬಂದು ಕೃಷಿಕರು ಬೆಳೆದ ಬಾಳೆ, ತೆಂಗು, ಕೊಕ್ಕೊ, ಅಡಿಕೆ ಇನ್ನಿತರ ಬೆಳೆಯನ್ನು ತಿಂದು ಕೃಷಿಕನಿಗೆ ತೊಂದರೆ ಉಂಟು ಮಾಡುತ್ತಿವೆ.
ಈ ಬಗ್ಗೆ ಅರಣ್ಯ ಇಲಾಖೆಗೆ ತಿಳಿಸಿದರೂ ಏನೂ ಪ್ರಯೋಜನವಾಗಿಲ್ಲ. ಆದರೆ ಇದೀಗ ಮಂಗಗಳು ಗುಂಪು ಗುಂಪಾಗಿ ಸೇರಿಕೊಂಡು ಮನೆಯ ಛಾವಣೆ ಏರಿ ಮನೆಯೊಳಗೆ ನುಗ್ಗಲು ಆರಂಭಿಸಿವೆ. ಮನೆಯ ತಾರಸಿಯ ಮೇಲೆ ಒಣಗಲು ಹಾಕಿದ ವಸ್ತುಗಳನ್ನು, ವಸ್ತ್ರಗಳನ್ನು ಕೊಂಡು ಹೋಗುತ್ತಿವೆ. ಮಕ್ಕಳ ನ್ನು ಬೆದರಿಸುತ್ತಿದೆ.ಅವರ ಆಟಿಕೆ ಗಳನ್ನ ಸೆಳೆದು ಚೂರು ಚೂರು ಮಾಡುತ್ತಿದೆ.
ನಗರದ ಅಂಬೆಟಡ್ಕ ಮತ್ತಿತರ ಪ್ರದೇಶದಲ್ಲಿ ಕೋತಿಗಳ ಕಾಟ ಜೋರಾಗಿದೆ. ಆದ್ದರಿಂದ ಇವುಗಳನ್ನು ನಗರ ಪ್ರದೇಶದಿಂದ ಹೊರ ಓಡಿಸಲು ಅರಣ್ಯ ಇಲಾಖೆ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
Kshetra Samachara
19/01/2022 07:48 pm