ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಕೋಡಿ ಬೀಚ್ ಗೆ ಉದ್ಯಾನವನ ಸೊಬಗು; ಇಂದು ಲೋಕಾರ್ಪಣೆ

ಕುಂದಾಪುರ: ಸಮುದ್ರ ಕಿನಾರೆ ಕೋಡಿಯಲ್ಲಿ ಸುಂದರ, ಸುವ್ಯವಸ್ಥಿತ ಉದ್ಯಾನವನ ನಿರ್ಮಿಸಲಾಗಿದೆ. ಇದನ್ನು ಪ್ರತಿವರ್ಷ ಸಮಸ್ಥಿತಿಯಲ್ಲಿಟ್ಟು ಜನರ ಉಪಯೋಗಕ್ಕೆ ದೊರೆಯುವಂತೆ ಮಾಡಬೇಕಿದೆ ಎಂದು ಡಿವೈಎಸ್‍ಪಿ ಶ್ರೀಕಾಂತ್ ಕೆ. ಹೇಳಿದರು.

ಅವರು ಕೋಡಿ ಸಾರ್ವಜನಿಕ ಆಸ್ಪತ್ರೆ ಹತ್ತಿರ "ಫ್ರೆಂಡ್ಸ್ ಗಾರ್ಡನ್ " ಲೋಕಾರ್ಪಣೆ ಮಾಡಿ ಮಾತನಾಡಿದರು.

ಉದ್ಯಾನವನದಲ್ಲಿ ಸಿಮೆಂಟ್ ಬೆಂಚುಗಳನ್ನು ಅಳವಡಿಸಲಾಗಿದ್ದು, ದೀಪ- ನೀರಿನ ವ್ಯವಸ್ಥೆ, ಹೂದೋಟ, ಮಕ್ಕಳಿಗೆ ಆಟವಾಡಲು ಉಯ್ಯಾಲೆಯಿದೆ. ದಾನಿಗಳ ನೆರವಿನಿಂದ ಈ ಉದ್ಯಾನವನ ನಿರ್ಮಿಸಲಾಗಿದೆ.

ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಮಾತನಾಡಿ, ಮೂಲ ಸೌಕರ್ಯ ಒದಗಿಸುವುದರ ಜತೆಗೆ ಉದ್ಯಾನವನದಂತಹ ಸೌಲಭ್ಯ ಕೊಡುವುದು ಕೂಡ ಪುರಸಭೆಯ ಪಾಲಿಗೆ ಜನಸೇವೆಯೇ ಆಗಿದೆ ಎಂದರು.ಕೆ.ಎಚ್. ರಾಜೇಂದ್ರ ಶೇರಿಗಾರ್ ಬುದ್ಧನ ಪ್ರತಿಮೆಗೆ ಹಾರ ಅರ್ಪಿಸಿದರು.

Edited By : Manjunath H D
Kshetra Samachara

Kshetra Samachara

06/01/2022 05:56 pm

Cinque Terre

30.2 K

Cinque Terre

0

ಸಂಬಂಧಿತ ಸುದ್ದಿ