ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ: ತಾಳಿಪಾಡಿ ಬಳಿ ಕೊನೆಗೂ ಬೋನಿಗೆ ಬಿದ್ದ ಚಾಲಾಕಿ ಚಿರತೆ

ಮುಲ್ಕಿ: ಕಿನ್ನಿಗೋಳಿ ಸಮೀಪದ ತಾಳಿಪಾಡಿ ಗ್ರಾಮದ ಅಂತಲಚ್ಚಿಲ್ ನಾಗಬನದ ಗುಡ್ಡೆ ಬಳಿ ಚಿರತೆಯೊಂದು ಆಹಾರ ಹುಡುಕಿಕೊಂಡು ಬಂದು ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನಿಗೆ ಬಿದ್ದಿದೆ.

ಕೆಲವು ತಿಂಗಳ ಹಿಂದೆ ಕಿನ್ನಿಗೋಳಿ-ತಾಳಿಪಾಡಿ ಪರಿಸರದಲ್ಲಿ ಚಿರತೆ ಕಾಟ ವಿಪರೀತವಾಗಿದ್ದು, ಮನೆಯವರ ನಾಯಿ ಸಹಿತ ಅನೇಕ ಸಾಕುಪ್ರಾಣಿಗಳು ನಾಪತ್ತೆಯಾಗಿ, ಚಿರತೆಗೆ ಆಹಾರವಾಗಿದ್ದವು.

ಈ ಸಂದರ್ಭ ಸ್ಥಳೀಯರಿಂದ ದೂರು ಬಂದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಅರಣ್ಯಾಧಿಕಾರಿಗಳು ಚಿರತೆ ಹಿಡಿಯಲು ಬೋನು ಇರಿಸಿದ್ದರು.

ಇಂದು ರಾತ್ರಿ 9 ಗಂಟೆ ವೇಳೆಗೆ ಆಹಾರ ಹುಡುಕಿಕೊಂಡು ಬಂದ ಚಿರತೆ ಬೋನಿನೊಳಗೆ ಸೆರೆಯಾಗಿದೆ. ಇದೀಗ ಮೂಡುಬಿದಿರೆ ವಲಯ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಚಿರತೆ ನೋಡಲು ಕುತೂಹಲಿಗರ ದಂಡೇ ಸೇರುತ್ತಿದೆ.

Edited By : Nagesh Gaonkar
Kshetra Samachara

Kshetra Samachara

25/12/2021 10:41 pm

Cinque Terre

9.33 K

Cinque Terre

0

ಸಂಬಂಧಿತ ಸುದ್ದಿ