ಸುಬ್ರಹ್ಮಣ್ಯ : ಸಮೀಪ ಕಾಡಾನೆಯೊಂದು ಕಾಡಿನಿಂದ ಹೆದ್ದಾರಿ ದಾಟಿ ನಾಡಿಗಿಳಿದ ಘಟನೆ ಶುಕ್ರವಾರ ಸಂಜೆ ವೇಳೆ ನಡೆದಿದೆ.
ಸುಬ್ರಹ್ಮಣ್ಯ - ಗುತ್ತಿಗಾರು - ಸುಳ್ಯ ಸಂಪರ್ಕ ರಾಜ್ಯ ಹೆದ್ದಾರಿಯ ನಡುಗಲ್ಲು ಸಮೀಪದ ಅಂಜೇರಿ ಬಸ್ ತಂಗುದಾನದ ಬಳಿ ಕಾಡಾನೆ ಕಾಡಿನಿಂದ ಇಳಿದು ರಸ್ತೆ ದಾಟಿ ಕೆಳ ಭಾಗದ ತೋಟಕ್ಕೆ ತೆರಳಿದೆ. ಇದೇ ಸಂದರ್ಭದಲ್ಲಿ ವಾಹನಗಳು ರಸ್ತೆ ದಾಟುತ್ತಿದ್ದರೂ ಕಾಡಾನೆ ಸ್ವಲ್ಪ ಹೊತ್ತು ರಸ್ತೆ ಬದಿ ನಿಂತು ಬಳಿಕ ತೋಟದ ಕಡೆ ತೆರಳಿದೆ.
ಇತ್ತೀಚೆಗೆ ಕಾಡಾನೆಗಳು ನಾಡಿನತ್ತ ಮುಖ ಮಾಡುತ್ತಿರುವ ಘಟನೆಗಳು ಹೆಚ್ಚಾಗುತ್ತಿದ್ದು ನಿನ್ನೆಯ ದಿನ ಪೆರಾಜೆ ಸಮೀಪ ಆನೆ ಪ್ರತ್ಯಕ್ಷವಾಗಿತ್ತು. ಜನತೆ ಇದರಿಂದಾಗಿ ಆತಂಕ ಪಡುವ ಸ್ಥಿತಿ ನಿರ್ಮಾಣವಾಗಿದೆ.
Kshetra Samachara
10/12/2021 10:56 pm