ವರದಿ: ರಹೀಂ ಉಜಿರೆ
ಇಂದ್ರಾಣಿ ; ಇದು ಯಾವುದೋ ಹಳ್ಳಿಯ ಕತೆಯಲ್ಲ.ಇದು ಉಡುಪಿ ಮಣಿಪಾಲ ನಗರದ ಮಧ್ಯದ ಪುಟ್ಟ ಊರಿನ ಕತೆ.ಇಲ್ಲಿ ಸುಮಾರು 60 ಮನೆಗಳಿವೆ.ಆದರೆ ಇವರ್ಯಾರೂ ಸಂಜೆ ಆಯ್ತು ಅಂದ್ರೆ ಮನೆಯಿಂದ ಹೊರಬರಲು ಭಯ ಪಡ್ತಾರೆ,ಯಾಕೆ?
ಇದು ಉಡುಪಿ ಜಿಲ್ಲೆಯ ಮಣಿಪಾಲ ನಗರದಿಂದ ಕೂಗಳತೆ ದೂರದಲ್ಲಿ ಇರೋ ಇಂದ್ರಾಣಿ ಎನ್ನುವ ಪುಟ್ಟ ಊರಿನ ಭಯದ ಸ್ಟೋರಿ.ಒಂಟಿ ಚಿತೆಯೊಂದು ಇಲ್ಲಿನ ಜನರ ನಿದ್ದೆಗೆಡಿಸಿದೆ! ನೆಮ್ಮದಿಯಾಗಿದ್ದ ಇಂದ್ರಾಣಿಯಲ್ಲಿ ಕಳೆದ ಒಂದು ವಾರದಿಂದ ಚಿರತೆಯೊಂದು ಸಂಚರಿಸುತ್ತಿದೆ.ರಾತ್ರಿ ವೇಳೆ ಹಾಗೂ ಮುಂಜಾನೆ ವೇಳೆ ಕಾಣಿಸಿಕೊಳ್ಳುವ ಚಿರತೆ ಊರಿನ ನಾಲ್ಕು ನಾಯಿಗಳನ್ನು ಬಲಿ ಪಡೆದಿದೆ.ಇದು ಊರವರನ್ನು ಭಯ ಬೀತರನ್ನಾಗಿಸಿದೆ. ಚಿರತೆ ಉಪಟಳಕ್ಕೆ ಊರವರು ಹೈರಾಣಾಗಿ ಹೋಗಿದ್ದಾರೆ.
ಇಂದ್ರಾಣಿ ಊರಲ್ಲಿ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ಕಚೇರಿಗೆ ಕೆಲಸಕ್ಕೆ ತೆರಳಿದವರು ಬರೋದು ರಾತ್ರಿ ಆದ್ರೆ ಭಯದಿಂದಲೇ ಮನೆ ಸೇರುವ ಪರಿಸ್ಥಿತಿ ಇದೆ. ವಾಹನದಲ್ಲಿ ಮನೆಗೆ ಬರುತ್ತಿರುವಾಗ ಚಿರತೆ ದಾಳಿ ನಡೆಸಿದ್ರೆ ಎನ್ನುವ ಆತಂಕ ಕಾಡುತ್ತಿದೆ...ಈ ಬಗ್ಗೆ ಅರಣ್ಯ ಇಲಾಖೆಗೆ ತಿಳಿಸಿದ್ರೂ, ಇಲಾಖೆ ಮಾತ್ರ ಇದುವರೆಗೂ ಬೋನ್ ಇಟ್ಟು ಚಿರತೆ ಹಿಡಿಯುವ ಕಾರ್ಯಕ್ಕೆ ಮುಂದಾಗಿಲ್ಲ ಅಂತಾರೆ ಊರವರು.
ಒಟ್ಟಿನಲ್ಲಿ, ಇಂದ್ರಾಣಿ ಜನ ಒಂದು ವಾರದಿಂದ ಚಿರತೆ
ಚಿರತೆ ಎಂದು ಭಯದಲ್ಲಿದ್ದಾರೆ. ಅರಣ್ಯ ಇಲಾಖೆ ಇನ್ನಾದರೂ ಬೋನು ಇಟ್ಟು ಚಿರತೆ ಹಿಡಿಯುವ ಕೆಲಸ ಮಾಡಿ ಊರ ಜನರ ಭಯ ಹೋಗಲಾಡಿಸಬೇಕಿದೆ.
Kshetra Samachara
04/12/2021 04:07 pm