ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಮೀಪದ ಹಳ್ಳಿಯೊಂದರಲ್ಲಿ ಮನೆಯಂಗಳಕ್ಕೆ ಚಿರತೆ ಬಂದಿರುವ ದೃಶ್ಯವೊಂದು ಮನೆಯ ಸಿಸಿ ಟಿವಿ ಕ್ಯಾಮರಾದಲ್ಲಿ ದಾಖಲಾಗಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
ನರಿಕೊಂಬು ಗ್ರಾಮದ ನಿರ್ಮಲ್ ಎಂಬಲ್ಲಿ ರಾತ್ರಿ ವೇಳೆ ಚಿರತೆಯೊಂದು ಮನೆಯ ಆವರಣಕ್ಕೆ ಬಂದು ಹೋಗುವ ದೃಶ್ಯವೊಂದು ಸಿಸಿ ಕ್ಯಾಮಾರಾದಲ್ಲಿ ದಾಖಲಾಗಿದೆ. ಡಿ. 1ರಂದು ತಡರಾತ್ರಿ 2ರ ಸುಮಾರಿಗೆ ನಿರ್ಮಲ್ ನಿವಾಸಿ ಜಯಂತ್ ನಿರ್ಮಲ್ ಮನೆಯ ಅಂಗಳಕ್ಕೆ ಚಿರತೆ ಬಂದಿದೆ. ನಾಯಿಯನ್ನು ಹುಡುಕಿಕೊಂಡು ಬಂದಿರುವುದಾಗಿ ಸಂಶಯಿಸಲಾಗಿದೆ. ಯಾವುದೋ ಶಬ್ದ ಕೇಳಿ ಚಿರತೆ ಓಡಿ ಹೋಗಿರುವುದು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಈ ಕುರಿತು ನರಿಕೊಂಬು ಗ್ರಾ.ಪಂ.ಗೆ ಮಾಹಿತಿ ನೀಡಿರುವುದಾಗಿ ಮನೆಯವರು ತಿಳಿಸಿದ್ದಾರೆ.
Kshetra Samachara
02/12/2021 10:47 pm