ಉಡುಪಿ: ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಅಕಾಲಿಕ ಮಳೆಯಾಗುತ್ತಿದ್ದು, ಇಂದೂ ಕೂಡ ಮುಂದುವರೆದಿದೆ. ಸಂಜೆ ವೇಳೆ ದಿಢೀರ್ ಎಂದು ಪ್ರಾರಂಭಗೊಂಡ ಬಿರುಮಳೆ ಜೂನ್, ಜುಲೈ ತಿಂಗಳನ್ನು ನೆನಪಿಸುವಂತಿತ್ತು.
ಮಳೆ ಕಡಿಮೆ ಆಗಬಹುದು ಎಂಬ ಲೆಕ್ಕಾಚಾರದಿಂದ ಉಡುಪಿಯ ಹಲವೆಡೆ ರಸ್ತೆ ದುರಸ್ತಿ, ಒಳಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ಆದರೆ, ಅಕಾಲಿಕ ಮಳೆಯಿಂದಾಗಿ ಅಗೆದು ಹಾಕಿದ ಮಣ್ಣು ಮಳೆನೀರಲ್ಲಿ ಕೊಚ್ಚಿ ಹೋಗಿ ಅವ್ಯವಸ್ಥೆಗೆ ಕಾರಣವಾಗಿದೆ.
ದಿಢೀರ್ ಮಳೆಗೆ ವಾಹನ ಸವಾರರು ಪರದಾಡಿದರು. ನಿರಂತರ ಸುರಿಯುತ್ತಿರುವ ಜಿಟಿಜಿಟಿ ಮಳೆಯ ಕಿರಿಕಿರಿಯಿಂದ ಜನರೂ ಬೇಸತ್ತಿದ್ದಾರೆ.
Kshetra Samachara
24/11/2021 09:38 pm