ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಆಳಕಡಲ ಬೋಟ್ ಮೀನುಗಾರಿಕೆ; ತಮಿಳುನಾಡಿನ ಯುವಕ ನಾಪತ್ತೆ

ಮಂಗಳೂರು: ನಗರದ ಮೀನುಗಾರಿಕೆ ಧಕ್ಕೆಯಿಂದ ಆಳಸಮುದ್ರ ಮೀನುಗಾರಿಕೆಗೆ ಬೋಟ್ ಮೂಲಕ ತೆರಳಿರುವ ಯುವಕ ಸಮುದ್ರ ಮಧ್ಯೆ ನಾಪತ್ತೆಯಾಗಿರುವ ಘಟನೆ ನಡೆದಿದೆ.

ತಮಿಳುನಾಡು ಮೂಲದ ವೇಲ್ ಮುರುಗನ್ (24) ನಾಪತ್ತೆಯಾದವರು. ನಾಲ್ಕು ತಿಂಗಳ ಹಿಂದಷ್ಟೇ ವೇಲ್ ಮುರುಗನ್ ಧಕ್ಕೆಯಲ್ಲಿ ಆಳ ಸಮುದ್ರ ಮೀನುಗಾರಿಕೆ ನಡೆಸುವ ಬೋಟ್ ನಲ್ಲಿ ಕೆಲಸಕ್ಕೆ ಸೇರಿದ್ದರು. ಅ.24 ರಂದು ರಾತ್ರಿ 10:30ಕ್ಕೆ ಅಲ್ ಕೌಸರ್ ಬೋಟ್‌ ಮೂಲಕ ಅವರು ಮೀನುಗಾರಿಕೆಗೆಂದು ತೆರಳಿದ್ದರು‌.

ಧಕ್ಕೆಯಿಂದ ಹೊರಟಿದ್ದ ಈ ಬೋಟ್‌ನಲ್ಲಿ ಒಟ್ಟು 10 ಮಂದಿ ಇದ್ದು, ರಾತ್ರಿ 11:15 ರ ವೇಳೆಗೆ ವೇಲ್ ಮುರುಗನ್ ಏಕಾಏಕಿ ನಾಪತ್ತೆಯಾಗಿದ್ದಾರೆ. ಜತೆಗಿದ್ದವರು ಟಾರ್ಚ್ ಹಾಕಿ ಸಮುದ್ರದಲ್ಲಿ ಹುಡುಕಾಡಿದರೂ ಆತ ಪತ್ತೆಯಾಗಿಲ್ಲ. ಬೋಟ್ ಸಮುದ್ರದಲ್ಲಿ ಸಾಗುತ್ತಿದ್ದಾಗ ಅಲೆಗಳ ಏರಿಳಿತದ ಅಬ್ಬರಕ್ಕೆ ಮುರುಗನ್ ಬೋಟ್‌ನಿಂದ ನೀರಿಗೆ ಬಿದ್ದಿರಬಹುದೆಂದು ಶಂಕಿಸಲಾಗಿದೆ. ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

28/10/2021 08:43 pm

Cinque Terre

56.11 K

Cinque Terre

0